ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಮುದ್ರೆ: ಸಿಎಂ ಡಿಕೆಶಿ ಸಂಪುಟದ ಸಾಮಾಜಿಕ ಪ್ರಾತಿನಿಧ್ಯದ ವಿವರಣೆ ಇಲ್ಲಿದೆ...Cabinet Expansion

ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಮುದ್ರೆ: ಸಿಎಂ ಡಿಕೆಶಿ ಸಂಪುಟದ ಸಾಮಾಜಿಕ ಪ್ರಾತಿನಿಧ್ಯದ ವಿವರಣೆ ಇಲ್ಲಿದೆ...Cabinet Expansion
ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಮುದ್ರೆ: ಸಿಎಂ ಡಿಕೆಶಿ ಸಂಪುಟದ ಸಾಮಾಜಿಕ ಪ್ರಾತಿನಿಧ್ಯದ ವಿವರಣೆ ಇಲ್ಲಿದೆ...Cabinet Expansion
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸಂಪುಟ ವಿಸ್ತರಣೆಯಲ್ಲಿ 19 ನೂತನ ಶಾಸಕರಿಂದ ಸಚಿವರಾಗಿ ಪದಗ್ರಹಣ
  • ಸಂಪುಟ ವಿಸ್ತರಣೆ ಮೂಲಕ ಸಾಮಾಜಿಕ ನ್ಯಾಯದ ದೊಡ್ಡ ಸಂದೇಶ ರವಾನಿಸಿದ ಕಾಂಗ್ರೆಸ್
  • ಸಾಂವಿಧಾನಿಕ ಹಾಗೂ ಶಾಸನಸಭಾ ಹುದ್ದೆಗಳಲ್ಲಿ ಅಹಿಂದ ಸಮುದಾಯಗಳಿಗೆ ಐತಿಹಾಸಿಕ ಪ್ರಾತಿನಿಧ್ಯ
  • ಸಚಿವ ಸಂಪುಟದಲ್ಲಿ ಜಾತಿ ಹಾಗೂ ವರ್ಗವಾರು ಸಮತೋಲನ ಕಾಯ್ದುಕೊಂಡ ಸರ್ಕಾರ
  • ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿಗೆ ಒಟ್ಟು ಏಳು ಸಚಿವ ಸ್ಥಾನ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಯು ( Cabinet Expansion ) ಅಂತಿಮಗೊಂಡಿದ್ದು, ಇಂದು ಸಂಜೆ 5 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಂದು ಸ್ಥಾನವನ್ನು ಖಾಲಿ ಉಳಿಸಲಾಗಿದ್ದು, ಸಿಎಂ ಡಿಕೆಶಿ ನೇತೃತ್ವದ ಸಂಪುಟಕ್ಕೆ ಒಟ್ಟು 32 ಸಚಿವರು ಸದ್ಯಕ್ಕೆ ಸೇರ್ಪಡೆಯಾಗಿದ್ದಾರೆ. 
ಈ ಸಂಪುಟ ವಿಸ್ತರಣೆಯೊಂದಿಗೆ ಜಾತಿ ಹಾಗೂ ವರ್ಗವಾರು ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯದ ದೊಡ್ಡ ಸಂದೇಶವನ್ನು ಕಾಂಗ್ರೆಸ್​ ರವಾನಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಮಗ್ರ ಪ್ರಾತಿನಿಧ್ಯವನ್ನು ಖಾತರಿಪಡಿಸುವ ಮೂಲಕ ಆಡಳಿತವು ಸಮಾಜದ ಪ್ರತಿಯೊಂದು ವಂಚಿತ ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸುವ ಬದ್ಧತೆಯನ್ನು ಈ ಸಂಪುಟ ವಿಸ್ತರಣೆಯು ಸ್ಪಷ್ಟವಾಗಿ ಬಿಂಬಿಸಿದೆ.
ಪಕ್ಷದ ಹೈಕಮಾಂಡ್ ನಾಯಕರು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವಾಗ ಜಾತಿ, ಧರ್ಮ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಹಾಗೂ ವಿವಿಧ ಸಾಮಾಜಿಕ ವರ್ಗಗಳ ನಡುವಿನ ಸಮತೋಲನವನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದಾರೆ ಎಂಬುದನ್ನು ಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟವನ್ನು ನೋಡಿದರೆ ಸ್ಪಷ್ಟವಾಗಿ ಗೋಚರಿಸುತ್ತದೆ. 

ಡಿಕೆಶಿ ಸಚಿವ ಸಂಪುಟದ ಜಾತಿ ಸಮೀಕರಣ

1. ಡಿಕೆ ಶಿವಕುಮಾರ್
2. ಡಾ. ಜಿ ಪರಮೇಶ್ವರ (ದಲಿತ ಪರಿಶಿಷ್ಟ ಜಾತಿ)
3. ಎಂಬಿ ಪಾಟೀಲ್ (ಲಿಂಗಾಯತ) 
4. ರಾಮಲಿಂಗಾ ರೆಡ್ಡಿ
5. ಕೃಷ್ಣ ಬೈರೇಗೌಡ (ಒಕ್ಕಲಿಗ)
10. ಸತೀಶ್ ಜಾರಕಿಹೊಳಿ (ವಾಲ್ಮೀಕಿ ಪರಿಶಿಷ್ಟ ಪಂಗಡ)
11. ಈಶ್ವರ್ ಖಂಡ್ರೆ (ಲಿಂಗಾಯತ)
15 ಪಿ.ಎಂ.ನರೇಂದ್ರಸ್ವಾಮಿ (ದಲಿತ ಬಲಗೈ)
16. ಶಿವರಾಜ್ ತಂಗಡಗಿ (ದಲಿತ ಭೋವಿ)
17 ರುದ್ರಪ್ಪ ಲಮಾಣಿ (ದಲಿತ ಲಂಬಾಣಿ)
18. ಕೆ.ಎಸ್.ಬಸವಂತಪ್ಪ (ದಲಿತ ಎಡಗೈ)
19. ಬಿ.ನಾಗೇಂದ್ರ (ಪರಿಶಿಷ್ಟ ಪಂಗಡ)
20. ಟಿ.ರಘುಮೂರ್ತಿ(ಪರಿಶಿಷ್ಟ ಪಂಗಡ)
21. B. Z. ಜಮೀರ್ ಅಹಮದ್ ಖಾನ್ (ಮುಸ್ಲಿಂ)
22. ರಿಜ್ವಾನ್ ಅರ್ಷದ್ (ಮುಸ್ಲಿಂ)
23. ಸಂತೋಷ್ ಲಾಡ್ (ಮರಾಠ)
24. ಮಧು ಬಂಗಾರಪ್ಪ (ಈಡಿಗ)
25. ಪುಟ್ಟರಂಗಶೆಟ್ಟಿ (ಉಪ್ಪಾರ)
26. ಎಸ್​ಎಸ್​ ಮಲ್ಲಿಕಾರ್ಜುನ್​​ (ಸಾದರ ಲಿಂಗಾಯತ)
27. ಡಾ. ಅಜಯ್ ಸಿಂಗ್ (ಕ್ಷತ್ರಿಯ)
28. ಎನ್. ಚಲುವರಾಯ ಸ್ವಾಮಿ (ಒಕ್ಕಲಿಗ)
29. ಕೆ.ಎಂ.ಶಿವಲಿಂಗೇಗೌಡ (ಒಕ್ಕಲಿಗ)
30. ಎಚ್.ಸಿ.ಬಾಲಕೃಷ್ಣ (ಒಕ್ಕಲಿಗ)
31. ಬಸವರಾಜ ರಾಯರೆಡ್ಡಿ (ರಡ್ಡಿ ಲಿಂಗಾಯಿತ)
32. ವಿಜಯಾನಂದ ಕಾಶಪ್ಪನವರ್ (ಪಂಚಮಸಾಲಿ ಲಿಂಗಾಯತ)
33. ಲಕ್ಷ್ಮಣ ಸವದಿ (ಗಾಣಿಗ ಲಿಂಗಾಯತ) 

ಡಿಕೆಶಿ ಸಚಿವ ಸಂಪುಟದ ಸಾಮಾಜಿಕ ಪ್ರಾತಿನಿಧ್ಯದ ವಿವರಣೆ

ಸಚಿವರು, ಸ್ಪೀಕರ್, ಡೆಪ್ಯುಟಿ ಸ್ಪೀಕರ್, ವಿಧಾನ ಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಸೇರಿದಂತೆ ಒಟ್ಟು 37 ಪ್ರಮುಖ ಹುದ್ದೆಗಳ ಪೈಕಿ 23 ಸ್ಥಾನಗಳನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ವರ್ಗದ ನಾಯಕರಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲೇ ಹಿಂದುಳಿದ ಹಾಗೂ ವಂಚಿತ ಸಮುದಾಯಗಳಿಗೆ ಈ ಪ್ರಮಾಣದ ದೊಡ್ಡ ಹುದ್ದೆಗಳು ಲಭಿಸಿರುವುದು ಇದೇ ಮೊದಲು.
ರಾಜ್ಯ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಎಂದಿನಂತೆ ಏಳು ಸಚಿವ ಸ್ಥಾನಗಳು ಮುಂದುವರಿದಿದ್ದು, ರೆಡ್ಡಿ ಸಮುದಾಯಕ್ಕೆ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನ ಒಲಿದಿದೆ. ಮುಖ್ಯಮಂತ್ರಿಗಳು ಕೂಡ ಒಕ್ಕಲಿಗ ಸಮುದಾಯದವರಾಗಿರುವುದರಿಂದ ಈ ವರ್ಗಕ್ಕೆ ಪ್ರಮುಖ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಇದರೊಂದಿಗೆ, ರಾಜ್ಯ ರಾಜಕಾರಣದಲ್ಲೇ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿಯ (ಎಸ್‌ಸಿ) ಏಳು ಮಂದಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮೂವರು ಬಲಗೈ, ಇಬ್ಬರು ಎಡಗೈ, ಒಬ್ಬರು ಲಂಬಾಣಿ ಹಾಗೂ ಒಬ್ಬರು ಭೋವಿ ಸಮುದಾಯದವರನ್ನು ಒಳಗೊಳ್ಳುವ ಮೂಲಕ ಎಸ್‌ಸಿ ಒಳಪಂಗಡಗಳಿಗೂ ಸಮತೋಲನ ಕಲ್ಪಿಸಲಾಗಿದೆ. ಜೊತೆಗೆ, ಮೂವರು ಪರಿಶಿಷ್ಟ ಪಂಗಡದ (ಎಸ್‌ಟಿ) ನಾಯಕರಿಗೂ ಸಚಿವ ಸ್ಥಾನ ನೀಡಲಾಗಿದೆ.
ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಮೂರು ಸಚಿವ ಸ್ಥಾನಗಳ ಜತೆಗೆ ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಯೂ ಸೇರಿ ಒಟ್ಟು ನಾಲ್ಕು ಪ್ರಮುಖ ಅಧಿಕಾರಗಳು ದೊರೆತಿವೆ. ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮುಸ್ಲಿಂ ನಾಯಕರಿಗೆ ಇಷ್ಟು ದೊಡ್ಡ ಪ್ರಮಾಣದ ಪ್ರಾತಿನಿಧ್ಯ ಸಿಕ್ಕಿರುವುದು ದಾಖಲೆಯಾಗಿದೆ. ಇದರೊಂದಿಗೆ, ಇತರೆ ಹಿಂದುಳಿದ ವರ್ಗಗಳ  ಅಭ್ಯರ್ಥಿಗಳಿಗೆ ಒಟ್ಟು ಏಳು ಸಚಿವ ಸ್ಥಾನಗಳು ಸಿಕ್ಕಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷ ಸ್ಥಾನಗಳಲ್ಲೂ ಒಬಿಸಿ ವರ್ಗದವರಿಗೆ ಮಣೆ ಹಾಕಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net