ಬಿಹಾರದಂತೆ ರಾಜ್ಯದಲ್ಲೂ ಕಾಂಗ್ರೆಸ್​ ಸ್ಥಿತಿ ಆಗಲಿದೆ: ಸಿ.ಸಿ ಪಾಟೀಲ

  ಗದಗ ಪತ್ರಿಕಾ ಭವನದಲ್ಲಿ ಬಿಹಾರ ಚುನಾವಣೆ ಕುರಿತು ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ರಾಜು ಕುರಡಗಿ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಅಶೋಕ ಸಂಕಣ್ಣವರ, ದತ್ತಣ್ಣ ಜೋಶಿ, ಅನಿಲ ಅಬ್ಬಿಗೇರಿ ಇತರರು ಇದ್ದರು.
ಗದಗ ಪತ್ರಿಕಾ ಭವನದಲ್ಲಿ ಬಿಹಾರ ಚುನಾವಣೆ ಕುರಿತು ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ರಾಜು ಕುರಡಗಿ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಅಶೋಕ ಸಂಕಣ್ಣವರ, ದತ್ತಣ್ಣ ಜೋಶಿ, ಅನಿಲ ಅಬ್ಬಿಗೇರಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
"ಮತ'ಚೋರಿ ಎಂದು ಪ್ರಚಾರ ಮಾಡುತ್ತ ಸುಳ್ಳನ್ನೇ ಬಿಂಬಿಸಿದ ಕಾಂಗ್ರೆಸ್​ ಪಕ್ಷ ಬಿಹಾರದಲ್ಲಿ ಒಂದಂಕ್ಕಿ ಸ್ಥಾನಕ್ಕೆ ಇಳಿದಿದೆ. ಭವಿಷ್ಯದಲ್ಲಿ ಬಿಹಾರದಂತೆ ಕರ್ನಾಟಕ ರಾಜ್ಯದಲ್ಲೂ ಕಾಂಗ್ರೆಸ್​ ಪರಿಸ್ಥಿತಿ ಆಗಲಿದೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬಿಹಾರದಲ್ಲಿ ಎನ್​ಡಿಎ ಗೆಲುವಿನ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷ ಆರಂಭದಿಂದಲೂ ಸುಳ್ಳನ್ನೇ ಹೇಳುತ್ತಲೇ ಪ್ರಚಾರ ಮಾಡಿತು. ರಾಹುಲ್​ ಗಾಂಧಿ ಮತಚೋರಿ ಎಂಬ ಅಪಪ್ರಚಾರದ ಪ್ರಯತ್ನ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರು ಬಿಹಾರದಲ್ಲಿ ಭಾಷಣ ವೇಳೆ ನರೇಂದ್ರ ಮೋದಿ ಹಠಾವೋ ಎಂದು ಭಾಷಣ ಮಾಡಿದ್ದರು. ಆದರೆ, ಜನರು ದೇಶದಿಂದಲೇ ಕಾಂಗ್ರೆಸ್​ ಹಠಾವೋ ಎಂಬ ನಿರ್ಣಯಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಬಿಹಾರದ ಜನರು ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ನಿತೀಶ ಕುಮಾರ್​ ನೇತೃತ್ವವನ್ನು ಜನರು ಒಪ್ಪಿಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್​ ಪಕ್ಷ ಒಂದಂಕಿಗೆ ಇಳಿದಿದೆ. ಪ್ರಜಾಪ್ರಭುತ್ವ ಇತಿಹಾಸದಲ್ಲಿ ಬಿಜೆಪಿಗೆ ಇಂದಿನ ದಿನ ಹೆಮ್ಮೆಯ ದಿನವಾಗಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಜಿಲ್ಲೆಯ ರಸ್ತೆಯ ಗುಂಡಿಗಳನ್ನು ಮುಚ್ಚುಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ರಾಜ್ಯ ಸರ್ಕಾರದಿಂದ ಸಿಎಂ ಬದಲಾವಣೆ ಚರ್ಚೆಗೆ ಇತ್ಯರ್ಥ ಹಾಡಲು ಸಾಧ್ಯವಾಗುತ್ತಿಲ್ಲ. ವಿಧಾನ ಸೌಧ, ವಿಕಾಸ ಸೌಧದಲ್ಲಿ ಸಚಿವರು ಎಷ್ಟು ದಿನ ತಮ್ಮ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಎಂ ಸಿದ್ದರಾಮಯ್ಯ ಬಳಿ ಇಲ್ಲ. ಗುಪ್ತಚರ ಇಲಾಖೆ ವರದಿ ಆಧರಿಸಿ ಸಚಿವರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರವನ್ನೇ ರಾಜ್ಯದ ಜನತೆಗೆ ಕಾಂಗ್ರೆಸ್​ ಸರ್ಕಅರ ನೀಡುತ್ತಿದ್ದು, ನಾವೇ ನೀಡಿದ್ದೇವೆ ಎಂದು ಕಾಂಗ್ರೆಸ್​ ಸುಳ್ಳು ಹೇಳುತ್ತಿದೆ. ಬೆಳೆ ಹಾನಿ ಸಮೀಕ್ಷೆಯನ್ನು ರ್ಪೂಣ ಪ್ರಮಾಣದಲ್ಲಿ ಮಾಡಿಲ್ಲ. ಹಳ್ಳ, ಕೊಳ್ಳ, ನದಿ ದಡದಲ್ಲಿ ಆಗಿರುವ ಬೆಳೆಹಾನಿಯಷ್ಟೇ ಪರಿಗಣಿಸಿದ್ದಾರೆ. ರ್ಪೂಣ ಪ್ರಮಾಣದ ಬೆಳೆ ಹಾನಿ ಸಮೀೆ ಮಾಡಬಾರದು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಾಂಗ್ರೆಸ್​ ಸರ್ಕಾರವೇ ತಿಳಿಸಿದೆ ಎಂದು ಸಿ.ಸಿ. ಪಾಟೀಲ ಆರೋಪಿಸಿದರು.
ಬಾಗಲಕೋಟೆಯಲ್ಲಿ ಕಬ್ಬಿನ ಲಾರಿ, ಟ್ರಾಕ್ಟರ್​ ಗಳಿಗೆ ಬೆಂಕಿ ಹಚ್ಚಲಾಗಿದೆ. ಬಾಗಲಕೋಟೆ ಜಿಲ್ಲೆಯ ಎಸ್ಪಿ, ಡಿಸಿ, ತಹಸೀಲ್ದಾರ, ಕಂದಾಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಸಿ.ಸಿ. ಪಾಟೀಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂರ್ಪೂಣ ಹದಗೆಟ್ಟಿದೆ. ಈ ಬಗ್ಗೆ ಗೃಹ ಸಚಿವರ ಬಳಸಿ ಉತ್ತರವಿಲ್ಲ ಎಂದು ಆರೋಪಿಸಿದರು. ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರ ಹಿತ ಕಾಪಾಡಬೇಕು ಮತ್ತು ರೈತರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿ ಆರಂಭದ ಮೊದಲು ಸಾಲುಮರದ ತಿಮ್ಮಕ್ಕ ನಿಧನಕ್ಕೆ ಸಂತಾಪ ಸೂಚಿಸಿದ ಸಿ.ಸಿ. ಪಾಟೀಲ ಅವರು, ಇಂದಿನ ಯುವ ಪೀಳಿಗೆ ಅವರ ವೃತ್ತಿಯನ್ನು ಅನುಸರಿಸಿ ಪರಿಸರ ಬೆಳೆಸಬೇಕು ಎಂದು ತಿಳಿಸದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಶ್ರೀಂಕಾತ ಕಟವಟೆ, ತೋಟೋಸಾ ಬಾಂಢಗೆ, ಬಿ.ಎಚ್​. ಲದ್ವಾ, ಅನಿಲ ಅಬ್ಬಿಗೇರಿ, ಸುರೇಶ ಚಿತ್ತರಿಗೆ, ದತ್ತಣ್ಣ ಜೋಶಿ, ಅಶೋಕ ಸಂಕಣ್ಣವರ ಇತರರು ಇದ್ದರು.
ಸರ್ಕಾರದ ವಿರುದ್ಧ ಪ್ರತಿಭಟನೆ:
ಹಿಂದುತ್ವದ ಭಾವನೆ ಇರುವ ಸ್ವಾಮೀಗಳನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್​ ಸರ್ಕಾರ ಮಾಡುತ್ತಿದೆ. ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ರಾಜ್ಯ ಸರ್ಕಾರ ವಿವಿಧ ಜಿಲ್ಲೆಗಳ ಪ್ರವೇಶ ನಿರ್ಬಂಧ ಹೇರಿದೆ. ಆದರೆ, ಸಂಪ್ರದಾಯ ಕೃಷಿ ಪದ್ದತಿ, ಸಂಸ್ಕಾರ, ಯುವಕರಿಗೆ ಮಾರ್ಗದರ್ಶನ ನೀಡುವ ಕನ್ನೇರಿಮಠದ ಶ್ರೀಗಳ ಪ್ರವೇಶ ನಿರ್ಭಂಧಗಳನ್ನು ತೆರವು ಮಾಡಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಟಕ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಗುವುದು ಎಂದು ಸಿಸಿಪಿ ತಿಳಿಸಿದರು.
ದೆಹಲಿಯಲ್ಲಿ ಬ್ಲಾಸ್ಟ್​ ಮಾಡಿದ ಜನರಿಗೂ ಕಾಂಗ್ರೆಸ್ಸಿಗೂ ನೇರ ಸಂಬಂಧ ಇದೆ. ಉಗ್ರರ ಬಗ್ಗೆ ಕಾಂಗ್ರೆಸ್​ ಮೊದಲಿನಿಂದಲೂ ಮೃದುಧೋರಣೆ ತಾಳುತ್ತಲೆ ಬಂದಿದೆ. ಹಾಗಾಗಿ ದೇಶದ ಜನರು ಕಾಂಗ್ರೆಸ್​ ಪಕ್ಷವನ್ನು ಸಾರಾಗಾಟವಾಗಿ ತಳ್ಳುತ್ತಿದ್ದಾರೆ ಎಂದು ಸಿಸಿಪಿ ಆರೋಪಿಸಿದರು.
ಎಮ್ಮೆ ಜತೆ ಆಡಿದ ಆಕಳ ಹೊಲಸು ತಿನ್ನುವುದನ್ನು ಕಲಿಯಿತು. ಹಾಗೇಯೇ ಬಿಹಾರದಲ್ಲಿ ತೇಜಸ್ವಿ ಯಾದವ್​ ಪರಿಸ್ಥಿತಿ ಆಯಿತು. ಕಾಂಗ್ರೆಸ್​ ಪಕ್ಷದ ಜತೆ ಸೇರಿ ತೇಜಸ್ವಿ ಯಾದವ ರಾಜಕೀಯ ಸ್ಥಿತಿ ಅಧೋಗತಿ ಆಯಿತು ಎಂದು ಪ್ರಶ್ನೆಯೊಂದಕ್ಕೆ ಸಿ.ಸಿ. ಪಾಟೀಲ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net