ಬೈರಕೂರು ಸೊಸೈಟಿ ಕೈ ವಶ Society

ಬೈರಕೂರು ಸೊಸೈಟಿ ಕೈ ವಶ Society
ಬೈರಕೂರು ಸೊಸೈಟಿ ಕೈ ವಶ Society
Published on
ಮುಳಬಾಗಿಲು: ತಾಲೂಕಿನ ಬೈರಕೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್​ ರೆಡ್ಡಿ, ಉಪಾಧ್ಯಕ್ಷರಾಗಿ ಟಿ.ಎಸ್​.ರವಿ ಆಯ್ಕೆಯಾಗಿದರು.Society
20 ವರ್ಷ ಕಾಲಗಳ ಕಾಲ ಜೆಡಿಎಸ್​ ವಶದಲ್ಲಿದ್ದ ಸೊಸೈಟಿಯನ್ನು ಪ್ರಸ್ತುತ ಕಾಂಗ್ರೆಸ್​ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಚುನಾವಣೆ ನಡೆಯಿತು. ಕಾಂಗ್ರೆಸ್​ ಬೆಂಬಲಿತ 6, ಜೆಡಿಎಸ್​ ಬೆಂಬಲಿತ 6 ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ರಮೇಶ್​ ರೆಡ್ಡಿ 7 ಮತ ಪಡೆದು ವಿಜೇತರಾದರು.
ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್​, ಆವಣಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿ.ಆದಿನಾರಾಯಣ ಅವರನ್ನು ಒಳಗೊಂಡಂತೆ ಹಲವು ಕಾಂಗ್ರೆಸ್​ ಮುಖಂಡರ ಸಹಕಾರದಿಂದ ಸೊಸೈಟಿ ಕೈವಶವಾಗಿದೆ. ಇದು ಮುಂದಿನ ಚುನಾವಣೆಗೆ ಗೆಲುವಿನ ದಿಕ್ಸೂಚಿ ಎಂದು ಬೂಡದೇರು ಕಾಂಗ್ರೆಸ್​ ಯುವ ಮುಖಂಡ ಆನಂದಮೋಹನ ರೆಡ್ಡಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net