ಬಿವಿವಿ ಸಂಘ ಭವಿಷ್ಯ ರೂಪಿಸುವ ಅಕ್ಷಯಪಾತ್ರೆ

ಮುಧೋಳ ನಗರದ ಬಿವಿವಿ ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಬಾಲಕಿಯರ ನೂತನ ಮಾಧ್ಯಮಿಕ ಶಾಲೆಯಲ್ಲಿ ಆಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಡಾ.ಅರವಿಂದ ಪಟ್ಟಣಶೆಟ್ಟಿ ಉದ್ಘಾಟಿಸಿದರು. ರುಕ್ಮಿಣಿ ಮಾನೆ, ಎಂ.ಎ.ಮೊರೆ,  ಜೆ.ಜಿ.ಕಟ್ಟಿಮನಿ ಇತರರಿದ್ದರು.
ಮುಧೋಳ ನಗರದ ಬಿವಿವಿ ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಬಾಲಕಿಯರ ನೂತನ ಮಾಧ್ಯಮಿಕ ಶಾಲೆಯಲ್ಲಿ ಆಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಡಾ.ಅರವಿಂದ ಪಟ್ಟಣಶೆಟ್ಟಿ ಉದ್ಘಾಟಿಸಿದರು. ರುಕ್ಮಿಣಿ ಮಾನೆ, ಎಂ.ಎ.ಮೊರೆ, ಜೆ.ಜಿ.ಕಟ್ಟಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯವಾದಿ ರುಕ್ಮಿಣಿ ಮಾನೆ ಅಭಿಮತ
  • ಬಿವಿವಿ ಸಂಘ ಭವಿಷ್ಯ ರೂಪಿಸುವ ಅಕ್ಷಯಪಾತ್ರೆ
ಮುಧೋಳ: ಬಿವಿವಿ ಸಂಘವು ಕೇವಲ ಶಿಕ್ಷಣ ಸಂಸ್ಥೆ ಅಂತ ಭಾವಿಸುವುದಿಲ್ಲ. ಸಾವಿರಾರು ವಿದ್ಯಾರ್ಥಿಗಳ ಪಾಲಿನ ಕನಸಿನ ಲೋಕ ಮತ್ತು ಬದುಕನ್ನು ರೂಪಿಸುವ ಅಕ್ಷಯಪಾತ್ರೆ ಎಂದು ಬೆಂಗಳೂರಿನ ನ್ಯಾಯವಾದಿ ರುಕ್ಮಿಣಿ ವಿಠ್ಠಲ ಮಾನೆ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಬಾಲಕಿಯರ ನೂತನ ಮಾಧ್ಯಮಿಕ ಶಾಲೆ, ಬಸವೇಶ್ವರ ಮಹಿಳಾ ಸ್ವತಂತ್ರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 2026-27ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಈ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೆ ಎನ್ನುವುದು ಹೆಮ್ಮೆಯ ವಿಷಯ. ಸಂಸ್ಕಾರ, ಸಂಸ್ಕೃತಿ ಬದುಕಿನ ಭಾಗವಾಗಿ ಕಲಿಸುತ್ತದೆ. ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳ ವಿವಿಧ ಸ್ಥಾನಗಳನ್ನು ಅಲಂಕರಿಸಿ ಕೀರ್ತಿ ತಂದಿದ್ದಾರೆ ಎಂದರು.
ವೈದ್ಯ ಡಾ.ಅರವಿಂದ ಪಟ್ಟಣಶೆಟ್ಟಿ ಮಾತನಾಡಿ, ನನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಪಠ್ಯಪುಸ್ತಕಗಳ ಪಾಠವಷ್ಟೇ ಅಲ್ಲದೆ ಜೀವನದ ಮೌಲ್ಯ ತಿಳಿಸಿಕೊಟ್ಟಿದೆ. ಸೋಲು, ಗೆಲವು ಸಮಾನವಾಗಿ ಸ್ವೀಕರಿಸುವ ಧೈರ್ಯವಂತ ಮನಸ್ಸು ನಿರ್ಮಿಸಿದೆ. ಬಿತ್ತಿದ ಜ್ಞಾನದ ಬೀಜ ಇಂದು ಮರವಾಗಿ ಲ ನೀಡುತ್ತಿದೆ. ನನ್ನ ಬದುಕಿನ ದಿಕ್ಕನ್ನು ಬದಲಾಯಿಸಿ, ದಾರಿದೀಪವಾದ ಈ ಸಂಸ್ಥೆ ನನ್ನ ಪಾಲಿಗೆ ಎರಡನೇ ತಾಯಿ ಎಂದು ಬಣ್ಣಿಸಿದರು.
ಪ್ರಾಚಾರ್ಯ ಎಂ.ಎ.ಮೊರೆ, ಎನ್‌ಜಿಎಚ್‌ಎಸ್ ಶಾಲೆಯ ಮುಖ್ಯ ಶಿಕ್ಷಕ ಜೆ.ಜಿ.ಕಟ್ಟಿಮನಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿ.ಎಸ್.ಜೈನಾಪುರ, ಪಿ.ಎಸ್.ಗನ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net