ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಪಿ ಸ್ಪರ್ಧೆ / ANEKAL

ಆನೇಕಲ್​ನಲ್ಲಿ ಹಮ್ಮಿಕೊಂಡಿದ್ದ ಬಹುಜನ ಸಮಾಜ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯ ಬಳಿಕ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖಂಡರಾದ ಎಚ್​.ಸಿ.ಶ್ರೀನಿವಾಸ್​, ರಾಜು, ವಿನ್ಸೆಂಟ್​, ನಾರಾಯಣಸ್ವಾಮಿ, ಚಂದಾಪುರ ಮುನಿರಾಜು, ಶೇಕ್​ ಬಾಬು, ಚೆಂಬೇನೆಹಳ್ಳಿ ಯಲ್ಲಪ್ಪ, ಗಣೇಶ್​, ಗೊಟ್ಟಿಗೆರೆ ನಾಗರಾಜು, ಮಹೇಶ್​, ಕೃಷ್ಣಪ್ಪ, ವೆಂಕಟಸ್ವಾಮಿ, ವೆಂಕಟೇಶ್​, ಒಣಕನಹಳ್ಳಿ ಯಲ್ಲಪ್ಪ, ಶಬೀರ್​ ಖಾನ್​, ಮಲವೀರಯ್ಯ ಇತರರು ಇದ್ದರು.

Published on
ಆನೇಕಲ್​ : ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದಿಂದ ನಿರೀೆ ಮೀರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ವಿರೋಧ ಪಕ್ಷಗಳಿಗೆ ಬಿಸಿ ಮುಟ್ಟಿಸುತ್ತೇವೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಕೆ.ಸಿ. ನಾಗರಾಜ್​ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಹುಜನ ಸಮಾಜ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ರಾಜಕಾರಣ ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲದೆ, ದೇಶದಲ್ಲಿ ಭ್ರಷ್ಟಾಚಾರ, ಅಧಿಕಾರ ವಹಿಸಿಕೊಂಡವರ ದಬ್ಬಾಳಿಕೆ ತೊಲಗಿಸಬೇಕು. ಕಾನ್ಷಿರಾಮ್​ ಅವರು ಇದೇ ದೃಷ್ಟಿಯಿಂದ ಪಕ್ಷವನ್ನು ಬಲಪಡಿಸಿದ್ದರು. ಬಹುಜನ ಸಮಾಜ ಪಕ್ಷ ದೇಶಕ್ಕೆ ಬಡವರಿಗಾಗಿ ಅನಿವಾರ್ಯವಾಗಿದೆ. ಎಸ್ಸಿ, ಎಸ್ಟಿ ಹಾಗೂ ಕೆಳವರ್ಗದ ಏಳಿಗೆಗೆ ಇರುವ ಏಕೈಕ ಪಕ್ಷವಾಗಿದ್ದು, ಅಂಬೇಡ್ಕರ್​ ಅವರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ಎಲ್ಲ ವರ್ಗದವರ ಪರವಾಗಿ ಹೋರಾಡಿದ ಅಂಬೇಡ್ಕರ್​ ಅವರಿಗೆ ಬಡವರು ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಕನಸು ಕಂಡಿದ್ದರು ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಕೆ.ರಾಮು ಮಾತನಾಡಿ, ಬಿರಿಯಾನಿ, ಹಣ, ಮದ್ಯ ಹಂಚಿಕೆ ಮಾಡಿ ರಾಷ್ಟ್ರೀಯ ಪಕ್ಷಗಳುಜನರನ್ನು ದಾರಿ ತಪ್ಪಿಸುತ್ತಿವೆ. ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಆನೇಕಲ್​ ತಾಲೂಕು ಕಚೇರಿ ಲ್ಯಾಂಡ್​ ಡೆವಲಪರ್​ ಗಳ ಪಾಲಾಗಿದೆ. ಬಡವರು ಹೋದರೆ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಕಚೇರಿಗೆ ಸರಿಯಾಗಿ ಬರುತ್ತಿಲ್ಲ, ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ನ್ಯಾಯ ಕೇಳಲು ಹೋದವರನ್ನು ಪೊಲೀಸರು ಜೈಲಿಗೆ ಕಳುಹಿಸುವರು. ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net