ಅಣ್ಣನಿಂದ ಕುಡುಕ ತಮ್ಮನ ಹತ್ಯೆ murderer brother

ಬನ್ನೇರುಘಟ್ಟ ಪೊಲೀಸರು ಶವ ಸಿಕ್ಕ ಸ್ಥಳವನ್ನು  ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದರು.
ಬನ್ನೇರುಘಟ್ಟ ಪೊಲೀಸರು ಶವ ಸಿಕ್ಕ ಸ್ಥಳವನ್ನು ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದರು.
Published on
ಆನೇಕಲ್:​ ಕುಡಿದು ಗಲಾಟೆ ಮಾಡುತ್ತಿದ್ದ ತಮ್ಮನ ವರ್ತನೆಯಿಂದ ಬೇಸತ್ತಿದ್ದ ಅಣ್ಣನೇ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿ ಮೃತದೇಹವನ್ನು ಪೊದೆಗೆ ಎಸೆದಿರುವ ಟನೆ ಬನ್ನೇರುಟ್ಟ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಆಳಂದ ಮೂಲದ ಧನರಾಜ (24) ಕೊಲೆಯಾದವ. ಹತ್ಯೆ ಮಾಡಿದ ಅಣ್ಣ ಶಿವರಾಜ್​ (28), ಆತನ ಸ್ನೇಹಿತರಾದ ಅದೇ ಗ್ರಾಮದ ಸಂದೀಪ್​(24) ಪ್ರಶಾಂತ್​(26) ಎಂಬುವರನ್ನು ಬನ್ನೇರುಘಟ್ಟ ಪೊಲೀಸ್​ ಇನ್​ಸ್ಪೆಕ್ಟರ್​ ಕೃಷ್ಣಕುಮಾರ್​ ನೇತೃತ್ವದ ತಂಡ ಬಂಧಿಸಿದೆ.
ಕ್ಯಾಬ್​ ಡೆವರ್​ ಆಗಿದ್ದ ಶಿವರಾಜ್​ ಬೆಂಗಳೂರಿನ ಎಚ್​ಎಸ್​ಆರ್​ ಬಡಾವಣೆಯಲ್ಲಿ ವಾಸವಾಗಿದ್ದ. ತಮ್ಮ ಧನರಾಜ ಕಲಬುರಗಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಿದ್ದ. ಕೆಲಸವಿಲ್ಲದೆ ಕುಡಿದು ಬಂದು ಗಲಾಟೆ ಮಾಡುವುದು, ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಜನರು ಮನೆ ಬಳಿ ಬಂದು ಧನರಾಜನ ಮೇಲೆ ದೂರು ಹೇಳಿ ಪ್ರತಿದಿನ ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆ
ಧನರಾಜ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.
ಸಹೋದರನ ಕಾಟ ತಾಳಲಾರದೆ ಶಿವರಾಜ್​, ಸ್ನೇಹಿತರ ಜತೆ ಸೇರಿ ಕೊಲೆಗೆಸಂಚು ರೂಪಿಸಿದ್ದ. ಅದರಂತೆ ನ.2ರಂದು ಕೆಲಸ ಕೊಡಿಸುವುದಾಗಿ ನಂಬಿಸಿ ಕಲಬುರಗಿಯಿಂದ ಕರೆಸಿಕೊಂಡು ಬನ್ನೆರುಘಟ್ಟ ನೈಸ್​ ರೋಡ್​ ಜಂಕ್ಷನ್​ ಬಳಿ ಕಾರಿನಲ್ಲಿ ಹತ್ತಿಸಿಕೊಂಡಿದ್ದರು.
ಮುಂದೆ ಡೆವರ್​ ಸೀಟ್​ ಪಕ್ಕದಲ್ಲಿ ಕುಳಿತು ಮೊಬೈಲ್​ ನೋಡುತ್ತಿದ್ದ ವೇಳೆಯಲ್ಲಿ ಧನರಾಜನ ಕೈಗಳನ್ನು ಸಂದೀಪ್​ ಮತ್ತು ಪ್ರಶಾಂತ್​ ಹಿಡಿದುಕೊಂಡು ಮಚ್ಚಿನಿಂದ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಮಾಡಿ ಶವವನ್ನು ಬನ್ನೇರುಘಟ್ಟ ಹಾಗೂ ಕಗ್ಗಲಿಪುರ ರಸ್ತೆ ಮಾರ್ಗದಲ್ಲಿ ಪೊದೆಯೊಳಗೆ ಎಸೆದು ಹೋಗಿದ್ದರು.
ನ.6ರಂದು ಕೊಳೆತ ಸ್ಥಿತಿಯಲ್ಲಿ ಶವ ಇರುವುದನ್ನು ನೋಡಿದ ಸ್ಥಳಿಯರು ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಪಕ್ಕದಲ್ಲಿದ್ದ ಖಾಸಗಿ ಕಂಪನಿಯ ಸಿಸಿಟಿವಿ ಪರಿಶೀಲನೆ ನಡೆಸಿದರು. ಕಾರಿನಲ್ಲಿ ಶವತಂದು ಎಸೆದಿರುವ ದೃಶ್ಯ ಸೆರೆಯಾಗಿತ್ತು. ಕಾರಿನ ನಂಬರ್​ ಪ್ಲೇಟ್​ ಆಧಾರದ ಮೇಲೆ ತಪಾಸಣೆಗೆ ಇಳಿದ ಬನ್ನೇರುಘಟ್ಟ ಪೊಲೀಸರು ಕೊಲೆಯಾದ ಧನರಾಜ್​ ಅಣ್ಣ ಶಿವರಾಜ್​ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net