ರಾಜಾಜಿನಗರದಲ್ಲಿ ಮರದ ಕೊಂಬೆ ಬಿದ್ದು ಕೋಮಾ ಸೇರಿದ ಬೈಕ್ ಸವಾರ: ಪಾಲಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ; ವಿಡಿಯೋ ವೈರಲ್​! Branch falls into Biker Head

ಒಣಗಿದ ಮರದ ಕೊಂಬೆ ಬಿದ್ದು ಕೋಮಾ ಸೇರಿದ ಬೈಕ್ ಸವಾರ
ಒಣಗಿದ ಮರದ ಕೊಂಬೆ ಬಿದ್ದು ಕೋಮಾ ಸೇರಿದ ಬೈಕ್ ಸವಾರ
Published on

ಪ್ರಮುಖ ಮುಖ್ಯಾಂಶಗಳು

  • ಒಣಗಿದ ಮರದ ಕೊಂಬೆ ಬಿದ್ದು ಕೋಮಾ ಸೇರಿದ ಬೈಕ್ ಸವಾರ
  • ಸುರೇಶ್ ಕೋಮಾ ಸ್ಥಿತಿ ತಲುಪಿದ ದುರ್ದೈವಿ
  • ಬಿಬಿಎಂಪಿ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶ
  • ಬೆಂಗಳೂರಿನ, ರಾಜಾಜಿನಗರದಲ್ಲಿ ನಡೆದ ಘಟನೆ
ಬೆಂಗಳೂರು: ಒಣಗಿದ ಮರದ ಕೊಂಬೆಯೊಂದು ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ತಲೆ ಮೇಲೆ ಬಿದ್ದ ಪರಿಣಾಮ, ಕೋಮಾ ಸ್ಥಿತಿಗೆ ತಲುಪಿರುವ ಘಟನೆ ನಗರದ ರಾಜಾಜಿನಗರ (Branch falls into Biker Head) ದಲ್ಲಿ ನಡೆದಿದೆ. 
ಈ ಅಫಘಾತಕ್ಕೆ ತುತ್ತಾದ ವ್ಯಕ್ತಿಯನ್ನು 52 ವರ್ಷದ ಸುರೇಶ್​ ಎಂದು ಗುರುತಿಸಲಾಗಿದ್ದು, ಇತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾಜಾಜಿನಗರದ ರಾಮ ಮಂದಿರದ ಬಳಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್​

ಈ ಘಟನೆಯ ಸಿಸಿಟಿವಿ ವಿಡಿಯೋ ಈಗ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದು, ಇದರಲ್ಲಿ ಬೈಕ್​ ಮೇಲೆ ಸುರೇಶ್​ ತೆರಳುತ್ತಿದ್ದಾಗ ದಿಡೀರ್​ ಆಗಿ ಒಣಗಿದ ಮರದ ಕೊಂಬೆಯೊಂದು ತಲೆ ಮೇಲೆ ಬಿದ್ದಿದೆ. ತಕ್ಷಣ ಆತ ರಸ್ತೆ ಮೇಲೆ ಕುಸಿದು ಬಿದ್ದಿದ್ದಾನೆ. 
ಸುರೇಶ್​ ತಲೆಗೆ ಹೆಲ್ಮೆಟ್​ ಧರಿಸದೇ ಇರುವ ಕಾರಣ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಶ್​ ಈಗ ಕೋಮಾದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಪಾಲಿಕೆ ವಿರುದ್ಧ ಸಿಡಿದೆದ್ದ ಸಾರ್ವಜನಿಕರು!

ಈ ಘಟನೆ ನಡೆಯುತ್ತಿದ್ದಂತೆ ರಾಜಾಜಿನಗರದ ನಿವಾಸಿಗಳು ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ಧ ಕೆಂಡಕಾರುತ್ತಿದ್ದಾರೆ. ಈ ಸ್ಥಳದಲ್ಲಿ ಒಣಗಿದ ಮರಗಳಿವೆ ಇದರಿಂದ ಸಾರ್ವಜನಿಕರಿಗೆ ಸಂಚರಿಸುವಾಗ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ನಾವು ಹತ್ತಾರು ಬಾರಿ ದೂರನ್ನು ನೀಡಿದ್ದೆವೆ.
ಆದರೆ ಈ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ತಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ, ಈಗ ಪಾಪ ಆ ವ್ಯಕ್ತಿ ಸಾವು-ಬದುಕಿನ ಹೋರಾಟ ನಡೆಸುವಂತಾಗಿದೆ. ಇದಕ್ಕೆಲ್ಲಾ ಪಾಲಿಕೆಯ ಬೇಜವಾಬ್ದಾರಿಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಹೆಲ್ಮೆಟ್​ನ್ನು ಕಡ್ಡಾಯವಾಗಿ ಧರಿಸಿ!

ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಪ್ರತಿಯೊಬ್ಬ ಸವಾರನ ಅತ್ಯಂತ ಪ್ರಮುಖ ಮತ್ತು ಜವಾಬ್ದಾರಿಯುತ ಕರ್ತವ್ಯವಾಗಿದೆ. ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇವುಗಳಲ್ಲಿ ಶೇಕಡಾ 70 ಕ್ಕೂ ಹೆಚ್ಚು ಸಾವುಗಳು ತಲೆಗೆ ಬಲವಾದ ಪೆಟ್ಟು ಬೀಳುವುದರಿಂದಲೇ ಸಂಭವಿಸುತ್ತಿವೆ. 
ಉತ್ತಮ ಗುಣಮಟ್ಟದ ಐಎಸ್‌ಐ (ISI) ಮುದ್ರೆ ಇರುವ ಹೆಲ್ಮೆಟ್ ಧರಿಸುವುದರಿಂದ ಅಪಘಾತದ ಸಮಯದಲ್ಲಿ ತಲೆಗೆ ಆಗುವ ಗಂಭೀರ ಗಾಯಗಳನ್ನು ಮತ್ತು ಶೇಕಡಾ 80 ರಷ್ಟು ಸಾವಿನ ಅಪಾಯವನ್ನು ತಪ್ಪಿಸಬಹುದು. ಕಾನೂನಿನ ಪ್ರಕಾರ ಕೇವಲ ದಂಡದಿಂದ ಪಾರಾಗಲು ಹೆಲ್ಮೆಟ್ ಧರಿಸದೇ, ಸ್ವಂತ ಜೀವದ ರಕ್ಷಣೆಗಾಗಿ ಅದನ್ನು ಧರಿಸುವುದು ಅನಿವಾರ್ಯವಾಗಿದೆ. 
ಅಷ್ಟೇ ಅಲ್ಲದೆ, ಹಿಂಬದಿ ಕುಳಿತು ಪ್ರಯಾಣಿಸುವವರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇಬ್ಬರ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದರ ಜೊತೆಗೆ ಅದರ ಬೆಲ್ಟ್ ಅಥವಾ ಸ್ಟ್ರಾಪ್ ಅನ್ನು ಸರಿಯಾಗಿ ಲಾಕ್ ಮಾಡಿಕೊಳ್ಳುವುದು ಅತ್ಯಗತ್ಯ. ರಸ್ತೆಯಲ್ಲಿ ಸಂಚರಿಸುವಾಗ ಧೂಳು, ಗಾಳಿ, ಕೀಟಗಳು ಕಣ್ಣಿಗೆ ಬೀಳದಂತೆ ತಡೆಯಲು ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಕೂಡ ಹೆಲ್ಮೆಟ್ ಸಹಕಾರಿಯಾಗಿದೆ, (ಏಜನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net