ಮೊಹಮ್ಮದ್ ಖದೀರ್‌ಗೆ ಬುಕ್‌ಬ್ರಹ್ಮ ಪುರಸ್ಕಾರ

mohammad-qadeer-babu
mohammad-qadeer-babu
Published on

ಪ್ರಮುಖ ಮುಖ್ಯಾಂಶಗಳು

  • * ಈ ಪುರಸ್ಕಾರವು 2 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಬೆಂಗಳೂರು: ಬುಕ್ ಬ್ರಹ್ಮ ಫೌಂಡೇಷನ್ ವತಿಯಿಂದ ನೀಡಲಾಗುವ 2026ನೇ ಸಾಲಿನ ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರಕ್ಕೆ ತೆಲುಗು ಸಾಹಿತಿ ಮೊಹಮ್ಮದ್ ಖದೀರ್ ಬಾಬು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವು 2 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆ.14ರಿಂದ 23ರವರೆಗೆ ಹಮ್ಮಿಕೊಂಡಿರುವ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-3’ರ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಾವಲಿಯಲ್ಲಿ ಜನಿಸಿದ ಮೊಹಮ್ಮದ್ ಖದೀರ್ ಬಾಬು, ಆಧುನಿಕ ತೆಲುಗು ಕಥಾ ಸಾಹಿತ್ಯದ ವಿಶಿಷ್ಟ ಧ್ವನಿಗಳಲ್ಲಿ ಒಬ್ಬರು. ಪತ್ರಕರ್ತ, ಚಿತ್ರಕಥೆಗಾರ ಮತ್ತು ಸಾಹಿತ್ಯ ಸಂಘಟಕರಾಗಿ ತೆಲುಗು ಸಾಹಿತ್ಯಕ್ಕೆ ಹೊಸ ದಿಕ್ಕನ್ನು ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net