ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಪೊಲೀಸರಿಂದ ತೀವ್ರ ತಪಾಸಣೆ
ಪೊಲೀಸರಿಂದ ತೀವ್ರ ತಪಾಸಣೆ
Published on
ಬೆಳಗಾವಿ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಇ-ಮೇಲ್ ಬಂದ ಹಿನ್ನೆಲೆ ಮಂಗಳವಾರ ತಪಾಸಣೆ ನಡೆಸಲಾಯಿತು.
ಡಿಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಬಾಂಬ್ ಪತ್ತೆದಳ ಮತ್ತು ಶ್ವಾನದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ನ್ಯಾಯಾಲಯ ಸಂಕೀರ್ಣದ ಇಂಚಿಂಚೂ ತಪಾಸಣೆ ನಡೆಸಿದರು. ಈ ವೇಳೆ ಕಲಾಪಗಳಿಗೆ ವಿರಾಮ ನೀಡಲಾಗಿತ್ತು. ಎಲ್ಲೂ ಬಾಂಬ್ ಇರುವಿಕೆ ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ನಿರ್ಧರಿಸಲಾಯಿತು. ಬಳಿಕ ಕಲಾಪಗಳು ಎಂದಿನಂತೆ ಮುಂದುವರಿದವು.
ಕಚೇರಿಗೆ ಇ-ಮೇಲ್ ಬಂದ ತಕ್ಷಣ ಕೋರ್ಟ್‌ಗೆ ತೆರಳಿ ತಪಾಸಣೆ ನಡೆಸಿದ್ದೇವೆ. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಮೇಲ್ ಮಾಡಿದವರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಡಿಸಿಪಿ ನಾರಾಯಣ ಬರಮನಿ ವಿಜಯವಾಣಿಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net