ಹೈಕೋರ್ಟ್ ಆವರಣದಲ್ಲಿ ಹೈ ಅರ್ಲಟ್ ಘೋಷಿಸಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಅಗ್ನಿಶಾಮಕ ದಳಗಳನ್ನು ಕರೆಸಲಾಯಿತು. ಸಿಬ್ಬಂದಿ, ವಕೀಲರನ್ನು ಹೊರಗೆ ಕಳಹಿಸಲಾಯಿತು. ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿ ಹೊರಗೆ ಕಳಹಿಸಿಲಾಯಿತು. ಕೆಲ ಗಂಟೆ ಹೈಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಿ, ಹುಸಿ ಬಾಂಬ್ ಸಂದೇಶ ಎಂಬುದು ಮನವರಿಕೆಯಾದ ಬಳಿಕ ಪುನರಾರಂಭಿಸಲಾಯಿತು.