ದೇಹದ ಪ್ರಯೋಗಾಲಯ ಬಾಯಿ ಲಾಲಾರಸ ಅದರ ಮುಖ್ಯಾಧಿಕಾರಿ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಲಾಲಾ ರಸವು ಬಾಯಿಯಲ್ಲಿರುವ ಜೈವಿಕರಸ. ಇದು ದೇಹದ ಅನೇಕ ಕ್ರಿಯೆಗಳಿಗೆ ಅವಶ್ಯವಾಗಿದ್ದು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಜೊಲ್ಲು ಅಥವಾ ಉಗುಳು ಎಂದೂ ಕರೆಯುತ್ತಾರೆ.

ನಮ್ಮ ಜೀವನದ ಮೊದಲ ಪ್ರಯೋಗ ಸಹ ಬಾಯಿಯಲ್ಲಿಯೇ ಆಗುವುದು. ಮಗು ತನಗೆ ಅರಿವಿಲ್ಲದೆಯೇ ಸಿಕ್ಕಿದ್ದನ್ನೆಲ್ಲಾ ಬಾಯಿಯಲ್ಲಿ ಹಾಕಿ ಅದರ ಆಕಾರ ರಚನೆ ರುಚಿಯ ಅನ್ವೇಷಣೆ ಮಾಡುತ್ತದೆ. ಇದರ ಮೂಲಕ ಮಗು ತನ್ನ ಪರಿಸರದ ಬಗ್ಗೆಯೂ ಕಲಿಯುತ್ತದೆ. ಮಕ್ಕಳು ವಿವಿಧ ಕಾರಣಗಳಿಗೆ ತಮ್ಮ ಬಾಯಿಯಲ್ಲಿ ವಸ್ತುಗಳನ್ನು ಹಾಕಿಕೊಳ್ಳುತ್ತಾರೆ. ಹಲ್ಲುಗಳು ಬರುವಾಗ ಅವರು ಬಾಯಿಯಲ್ಲಿ ವಸ್ತುಗಳನ್ನು ಹಾಕುವ ಸಾಧ್ಯತೆ ಹೆಚ್ಚು. ಇವು ಬೆಳವಣಿಗೆಯ ಮೈಲಿಗಲ್ಲುಗಳು.

ನಮ್ಮ ದೇಹದ ಮೊದಲ ಪ್ರಯೋಗಾಲಯ ನಮ್ಮ ಬಾಯಿ ಮತ್ತು ಲಾಲಾ ರಸ ಅದರ ಮುಖ್ಯ ಅಧಿಕಾರಿ. ಅದು ಬಾಯಿಯ ಜೀವರಸ. ಲಾಲಾ ರಸವಿಲ್ಲದಿದ್ದರೆ ವೈಫೈ ಇಲ್ಲದ ಮೊಬೈಲ್​ನ

ಹಾಗೆ ನಮ್ಮ ಬಾಯಿ, ರುಚಿ, ಪಾಚನ, ಸಂವಹನ ಎಲ್ಲವೂ ಕಷ್ಟ. ಲಾಲಾ ರಸವೇನಾದರೂ ಮುಷ್ಕರ ಹೂಡಿದರೆ ಪಿಜ್ಜಾ ತಿಂದರೂ ಕಾಗದ ತಿಂದ ಹಾಗಿರುತ್ತದೆ. ಇನ್ನು ಮಾತನಾಡಲು ಹೋದರೆ ಹಲ್ಲುಗಳು ನಾಲಿಗೆಯ ಜೊತೆ ಜಗಳವಾಡುತ್ತಿವೆಯೋ ಏನೋ ಎನ್ನುವ ರೀತಿ ಇರುತ್ತದೆ. ಆಹಾರ ನುಂಗುವಿಕೆಯಂತೂ ಅಸಾಧ್ಯವಾದ ಕೆಲಸ. ಇಷ್ಟೇ ಅಲ್ಲದೆ ಹಾನಿಕಾರಿಕ ಬ್ಯಾಕ್ಟೀರಿಯಾಗಳಂತೂ ಬಾಯಲ್ಲಿಯೇ ಪಾರ್ಟಿ ಆರಂಭಿಸಿಬಿಡುತ್ತವೆ. ಹಲ್ಲು ಹುಳುಕು ದುರ್ವಾಸನೆ ಗಳನ್ನು ಉಡುಗೊರೆಯಾಗಿ ಕೊಡುವುದರಲ್ಲಿ ಅನುಮಾನವೇ ಇಲ್ಲ.

ಹೌದು, ಲಾಲಾ ರಸವೆಂದರೆ ಬರಿ ನೀರಲ್ಲ. ಅದು ಶೇಕಡ 99 ನೀರು ಮತ್ತು ಶೇಕಡ 1 ಎಲೆಕ್ಟ್ರೋಲೈಟ್ಸ್ ಪೋ›ಟೀನ್ ಎನ್ಜೈಮ್ಸ್ಗಳೆಂಬ ಅದ್ಬುತಗಳನ್ನು ಹೊಂದಿರುವ ಜೀವರಸ. ಹಾಗಾದರೆ ಎಲ್ಲಿಂದ ಬರುತ್ತದೆ ಈ ಲಾಲಾರಸ? ಕಚ್ಟಟಠಿಜಿಛ ಠ್ಠಚಿಞಚ್ಞಛಚಚ್ಝಿಛ್ಟಿ ಮತ್ತು ಠ್ಠಚ್ಝಿಜ್ಞಿಜ್ಠಚ್ಝ ಎಂಬ ಗ್ರಂಥಿಗಳು ಲಾಲಾ ರಸವನ್ನು ಉತ್ಪತ್ತಿ ಮಾಡುತ್ತವೆ. ಇದೊಂದು ಮಲ್ಟಿ ಟಾಸ್ಕಿಂಗ್ ದ್ರವವೆಂದರೆ ತಪ್ಪಾಗಲಾರದು. ಬಾಯಿಯ ಶುದ್ಧತೆ ಕಾಪಾಡಿಕೊಳ್ಳುವುದಕ್ಕೆ ಈ ಲಾಲಾ ರಸ ಬೇಕೇ ಬೇಕು. ಇದೊಂದು ನೈಸರ್ಗಿಕ ಮೌತ್ ವಾಶ್. ಇದರಿಂದ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಬಹುದು. ತಿಂದ ಆಹಾರ ಪದಾರ್ಥಗಳನ್ನು ಹಲ್ಲಿನ ಮೇಲ್ಮೈ ಹಾಗೂ ಸಂದುಗಳಿಂದ ಚದುರಿಸುವ ಮೂಲಕ ಬಾಯಿಯಲ್ಲಿರುವ ಆಮ್ಲಗಳ ಸಮತೋಲನವನ್ನು ಕಾಯ್ದುಕೊಂಡು ವಾಸನೆ ಉಂಟು ಮಾಡುವ ಬ್ಯಾಕ್ಟೀರಿಯಾ ಗಳ ಬೆಳವಣಿಗೆಯನ್ನು ಇದು ತಡೆಯುತ್ತದೆ.

ಲಾಲಾ ರಸದ ಉತ್ಪಾದನೆ ಕಡಿಮೆಯಾದಾಗ, ಬಾಯಿ ಒಣಗಲು ಕಾರಣವಾದಾಗ ಬ್ಯಾಕ್ಟೀರಿಯಾ ಮತ್ತು ಆಹಾರದ ಅವಶೇಷಗಳು ಸಂಗ್ರಹವಾಗಿ ಬಾಯಿಯ ದುರ್ವಾಸನೆ ಉಂಟಾಗುತ್ತದೆ. ಹೀಗೆ ಲಾಲಾ ರಸದ ಹರಿವು ಕಡಿಮೆಯಾದಾಗ ಒಣಬಾಯಿ ತೊಂದರೆ ಉಂಟಾಗಬಹುದು. ಬಾಯಿಯಲ್ಲಿ ಒಣ ಭಾವನೆ, ಊಟ ಅಗಿಯಲು ಅಥವಾ ತಿನ್ನಲು ತೊಂದರೆಯಾಗುವುದು, ಮಾತನಾಡುವಾಗ ತಡವರಿಸುವುದು, ರುಚಿಗ್ರಹಿಸುವುದರಲ್ಲಿಯೂ ತೊಂದರೆಯಾಗುವುದು, ಬಾಯಿ ಉರಿ, ಪದೇಪದೇ ಹುಣ್ಣಾಗುವುದು, ಕೆಟ್ಟ ಉಸಿರಾಟದ ಅನುಭವ ಮತ್ತು ಸಾಮಾನ್ಯರಿಗಿಂತ ಹೆಚ್ಚು ದಂತ ಕುಳಿಗಳು ಉಂಟಾಗಬಹುದು. ಕೃತಕ ಹಲ್ಲುಗಳ ಸೆಟ್, ಡೆಂಟ್ಯೂರ್​ಗಳನ್ನು ಧರಿಸುವಲ್ಲಿಯಂತೂ ತೊಂದರೆ ತಪ್ಪಿದ್ದಲ್ಲ. ಲಾಲಾ ರಸವು ಬಾಯಿಯ ದುರ್ವಾಸನೆ ಉಂಟುಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಮತ್ತು ಸಮತೋಲಿತ ಮೌಖಿಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕಿಣ್ವಗಳನ್ನು ಸಹ ಒಳಗೊಂಡಿದೆ. ಹೀಗೆ ಲಾಲಾರಸದ ಹರಿವು ಕಡಿಮೆಯಾಗಿ ಒಣಬಾಯಿಯ ತೊಂದರೆ ಉಂಟಾಗಲು ಕೆಲವು ಔಷಧಗಳ ಸೇವನೆಯೂ ಕಾರಣವಾಗಿರುತ್ತದೆ.

ಹಾಗಾದರೆ ಲಾಲಾರಸ ಕಡಿಮೆಯಾದಾಗ ಏನು ಮಾಡಬೇಕು?

  • ಲಾಲಾರಸದ ಉತ್ಪಾದನೆಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಬಾಯಿಯನ್ನು ತೇವವಾಗಿಡಲು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು.
  • ಸಕ್ಕರೆ ರಹಿತ ಚೀವಿಂಗಂ ಅಥವಾ ಕ್ಯಾಂಡಿಗಳು ಲಾಲಾರಸದ ಹರಿವನ್ನು ಹೆಚ್ಚಿಸಲು ಉತ್ತೇಜಿಸುತ್ತದೆ. ಇದರಿಂದ ಬಾಯಿಯನ್ನು ಸ್ವಚ್ಛಗೊಳಿಸಲು ಮತ್ತು ತೇವಾಂಶ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
  • ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದಲೂ ಲಾಲಾ ರಸವನ್ನು ಹೆಚ್ಚಿಸಬಹುದು.
  • ಇನ್ನು ಜೀವನ ಕ್ರಮದಲ್ಲಿನ ಬದಲಾವಣೆಗಳು, ಸರಿಯಾದ ನಿದ್ರೆ,ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆಯಲ್ಲಿ ಮಿತಿ, ಧೂಮಪಾನವನ್ನು ತ್ಯಜಿಸುವುದು, ಕಾಫಿ, ಟೀ ಗಳನ್ನು ಕಡಿಮೆ ಮಾಡುವುದು ಸೂಕ್ತ.

ಹಲ್ಲುಗಳನ್ನು ಕ್ಷಯಕಾರಕ ಬ್ಯಾಕ್ಟೀರಿಯಾ ಗಳಿಂದ

ರಕ್ಷಿಸಲು ಬಾಯಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಮುಖ್ಯ, ಉತ್ತಮ ಮೌಖಿಕ ಆರೋಗ್ಯ ಮತ್ತು ನಿಯಮಿತವಾಗಿ ಹಲ್ಲಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ಬಾಯಿ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net