ಸುದ್ದಿಗೋಷ್ಠಿಯಲ್ಲಿ ವಿಜಯದೇವ್, ಕಾಂತರಾಜು, ರಂಜನ್, ಭಾನುಪ್ರಕಾಶ್, ಸುಮಂತ್ ಇದ್ದರು.
Published on:
Copied
Follow Us
ಕನಕಪುರ: ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಪಥಂಜಲಿ ಯೋಗ ಸಮಿತಿ ಮತ್ತು ರೋಟರಿ ಸಹಯೋಗದಲ್ಲಿ ನಗರದಲ್ಲಿ ಜು.29ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಡಿ.ವಿಜಯದೇವ್ ತಿಳಿಸಿದರು.
ರೋಟರಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಥಂಜಲಿ ಯೋಗ ಸಮಿತಿ ಸಹಯೋಗದಲ್ಲಿ ನಾಲ್ಕು ವರ್ಷಗಳಿಂದ ರಕ್ತದಾನ ಶಿಬಿರ ನಡೆಯಲಿದೆ. ಸೈನಿಕರು ಹಾಗೂ ಹುತಾತ್ಮ ಯೋಧರ ತ್ಯಾಗ ಸ್ಮರಿಸಲು ಹಾಗೂ ಸಾರ್ವಜನಿಕರಲ್ಲಿ ಸೇವಾ ಮನೋಭಾವ ಬೆಳೆಸಲು ಶಿಬಿರ ಆಯೋಜಿಸಲಾಗಿದೆ ಎಂದರು.
ರೋಟರಿ ಅಧ್ಯಕ್ಷ ಕಾಂತರಾಜು ಹಾಗೂ ಮಾಜಿ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಪ್ರತಿ ವರ್ಷ ರೋಟರಿ ಸಂಸ್ಥೆ 800 ಯೂನಿಟ್ ರಕ್ತ ಸಂಗ್ರಹಿಸಿ ರಕ್ತ ನಿಧಿ ಕೇಂದ್ರಗಳಿಗೆ ರವಾನಿಸುತ್ತವೆ, ಪ್ರಸಕ್ತ ವರ್ಷದಲ್ಲಿ ರೋಟರಿ ಸಂಸ್ಥೆ 1000 ಯೂನಿಟ್ ರಕ್ತ ಸಂಗ್ರಹಿಸುವ ಗುರಿಯಿದೆ. ರೋಗಿಗಳಿಗೆ ರಕ್ತ ಕೊರತೆ ನೀಗಿಸುವ ಉದ್ದೇಶದಿಂದ ಸೇವಾ ಮನೋಭಾವದಿಂದ ನಡೆಯುವ ಈ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಪಂಥಜಲಿ ಯೋಗ ಸಮಿತಿಯ ಸುಮಂತ್, ವೆಂಕಟೇಶ್, ರೋಟರಿ ಮಾಜಿ ಅಧ್ಯಕ್ಷ ಸಿದ್ದರಾಜು, ಜಯಪ್ರಕಾಶ್, ಚಂದ್ರಪ್ರಭಾ, ಕಾರ್ಯದರ್ಶಿ ರಂಜನ್, ರಾಮಚಂದ್ರ, ವೀರಭದ್ರ, ಸುರೇಂದ್ರ, ದೇತಯ್ಯ ಇತರರು ಇದ್ದರು.