ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟೆ, ಶ್ರೀ ಸಿದ್ಧಲಿಂಗ ದೇವರ ಅಭಿಮಾನಿ ಬಳಗದ ವತಿಯಿಂದ ಶ್ರೀಗಳ 25ನೇ ಜನ್ಮದಿನೋತ್ಸವ ಅಂಗವಾಗಿ ಶ್ರೀಖಾಸ್ಗತೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನದಿಂದ ತುರ್ತು ಪರಿಸ್ಥಿತಿಗಳಲ್ಲಿ ಜೀವಗಳನ್ನು ಉಳಿಸುವ ಶ್ರೇಷ್ಠ ಕಾರ್ಯ. ಈ ಶಿಬಿರದಲ್ಲಿ 48 ಜನರು ರಕ್ತದಾನ ಮಾಡಿದ್ದಾರೆ. ರಕ್ತದಾನದಿಂದ ಆಪತ್ತು ಕಾಲದಲ್ಲಿ ಅನ್ಯರಿಗೆ ಅನುಕೂಲವಾಗುತ್ತದೆ ಎಂದರು.
ಮುರುಘೇಶ ವಿರಕ್ತಮಠ, ಆರೋಗ್ಯ ಇಲಾಖೆ ದಿಲೀಪ್‌ಸಿಂಗ್, ಅರುಣಕುಮಾರ, ನಬಿಸಾಬ, ಪ್ರಕಾಶ ಕವಲಗಿ, ಸಿದ್ದಮ್ಮ ಬ್ಯಾಲ್ಯಾಳ, ಅನ್ನಪೂರ್ಣಾ ಹಿರೇಗೌಡ್ರು, ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ, ಹಾಗೂ ಡಾ. ಎ.ಎ. ನಾಲಬಂದ, ಡಾ. ವಿಜಯಕುಮಾರ ಕಾರ್ಚಿ, ಡಾ.ಗುರು ಚಿತ್ತರಗಿ, ಶಶಿಗೌಡ ಕೇಸರಬಾವಿ ಮತ್ತಿತರರಿದ್ದರು.