ಯುವಕರಲ್ಲಿ ರಕ್ತದಾನ ಪ್ರಜ್ಞೆ ಮೂಡಿಸಿ

ಮದ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಂ.ಎಂ.ಅಂಗಡಿ, ಡಾ.ಮೇರಾಜ ಶೀಲವಂತರ, ಎಸ್​.ಎನ್​.ಕಡಳ್ಳಿ, ಆನಂದ ಬಿಲಕಂಚಿ ಇತರರಿದ್ದರು.
ಮದ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಂ.ಎಂ.ಅಂಗಡಿ, ಡಾ.ಮೇರಾಜ ಶೀಲವಂತರ, ಎಸ್​.ಎನ್​.ಕಡಳ್ಳಿ, ಆನಂದ ಬಿಲಕಂಚಿ ಇತರರಿದ್ದರು.
Published on
ತಲ್ಲೂರ: ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ೇತ್ರ ಆರೋಗ್ಯ ಶಿಣಾಧಿಕಾರಿ ಎಂ.ಎಂ.ಅಂಗಡಿ ಹೇಳಿದರು.
ಮದ್ಲೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ವೈದ್ಯಾಧಿಕಾರಿ ಡಾ.ಮೇರಾಜ ಶೀಲವಂತರ ಮಾತನಾಡಿ, ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯುತ್ತದೆ ಎಂದರು. ಎಸ್​.ಎನ್​.ಕಡಳ್ಳಿ, ಎಸ್​ಡಿಎಂಸಿ ಅಧ್ಯ ಆನಂದ ಬಿಲಕಂಚಿ, ಉಪಾಧ್ಯ ಈಶ್ವರ ಹೊಟ್ಟಿನವರ, ಆಯುಷ್ಯ ವೈದ್ಯಾಧಿಕಾರಿ ಡಾ.ವರ್ಷ ಮೊಳೆಕರ, ಮುಖ್ಯಶಿಕ ಸಿ.ಬಿ.ಇಂಗಳಿ, ಎಂ.ಎಚ್​.ಹುಣಸಿಕಟ್ಟಿ, ಹನಮಂತರಾವ ಪಚ್ಚಿನವರ, ಮಂಜುನಾಥ ಜಡಗನ್ನವರ, ಶಿಲ್ಪಾ ಗುರುಬಗಟ್ಟಿಮಠ, ಬಸವರಾಜ ಹೊಟ್ಟಿನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net