

ಪ್ರಮುಖ ಮುಖ್ಯಾಂಶಗಳು
ಅಂತರರಾಜ್ಯ ಬೈಕ್ ಕಳ್ಳರ ಬಂಧನ
|13 ದ್ವಿಚಕ್ರ ವಾಹನ ವಶಕ್ಕೆ
ಚಿಕ್ಕೋಡಿ : ಪಟ್ಟಣದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 13 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಅಸ್ಲಾಂ ಮುಲ್ತಾನಿ( 32), ಅಬುಬಕರ್ ಮುಲ್ತಾನಿ( 27) ಬಂಧಿತರು.
ಈಚೆಗೆ ತಾಲೂಕಿನ ನನದಿವಾಡಿಯ ಬಾಳಗೌಡ ಖೋತ ಎಂಬುವವರು ಪಟ್ಟಣದ ಭಾತೆ ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದ ತಮ್ಮ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು.
ಈ ಕುರಿತು ತನಿಖೆ ನಡೆಸಿದ
ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಿಕ್ಕೋಡಿ ಸೇರಿದಂತೆ ಮಾಳಮಾರುತಿ, ಕುಲಗೋಡ, ಯಮಕನಮರಡಿ, ಘಟಪ್ರಭಾ, ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಹಾರಾಷ್ಟ್ರದ ಸಾತಾರಾ ನಗರದ ವಿವಿಧೆಡೆ ಕಳವು ಮಾಡಿರುವುದರ ಬಗ್ಗೆ ಒಪ್ಪಿದ್ದಾರೆ. ಬಂಧಿತರಿಂದ
ಒಟ್ಟು 13 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.