ಪಾದಚಾರಿಗಳ ಮಾರ್ಗಗಳು, ಸೈಕಲ್ ಮಾರ್ಗಗಳು, ನವೀಕರಿಸಬಹುದಾದ ಇಂಧನದಿಂದ ಚಾಲಿತ ವಿದ್ಯುತ್ ವಾಹನಗಳ ಬಳಕೆ, ಉತ್ತಮ ಗೊಳಿಸಬೇಕಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು, ಸಾರಿಗೆಯಲ್ಲಿ ಸ್ವಚ್ಛ ಹಾಗೂ ಪರಿಸರಕ್ಕೆ ಪೂರಕ ಇಂಧನಗಳ ಬಳಕೆ, ಹೀಗೆ ಒಟ್ಟಾರೆ ಪರಿಸರಕ್ಕೆ ಪೂರಕ ಬದಲಾವಣೆಗೆ ಸ್ಥಿರ ಸಾರಿಗೆ ಒತ್ತು ನೀಡುತ್ತದೆ. ಸರ್ಕಾರ ಅಳವಡಿಸುವ ಮೆಟ್ರೋ ರೈಲು, ವಿದ್ಯುತ್ ಬಸ್‌ಗಳು, ಇ-ವಾಹನ ಕೊಳ್ಳುವಾಗಿನ ವಿನಾಯ್ತಿ, “ರಾಷ್ಟ್ರೀಯ ವಿದ್ಯುತ್ ವಾಹನ ಮಿಷನ್” ಮತ್ತು “ಸ್ಮಾರ್ಟ್ ಸಿಟಿ” ಯೋಜನೆಗಳೆಲ್ಲವೂ ಸ್ಥಿರ ಸಾರಿಗೆಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ನಿಜ ವ್ಯವಸ್ಥೆ ರೂಪಿಸಿ ಕೊಡುವ ಕೆಲಸ ಸರ್ಕಾರ ಮಾಡಬೇಕು, ಸಾಮಾನ್ಯರಾಗಿ ನಮ್ಮ ಕರ್ತವ್ಯವೂ ಇದೆಯಲ್ಲ!