ಈ ಉತ್ಸವದಲ್ಲಿ ಭಾರತದ ಪ್ರಮುಖ ನಾಟಕಗಳಲ್ಲದೆ, ವಿದೇಶಿ ನಾಟಕಗಳನ್ನೂ ಆಹ್ವಾನಿಸಲಾಗಿದೆ. ಒಟ್ಟು 5 ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕವಿಗೋಷ್ಠಿ, ರಂಗ ಚಿಂತನೆ, ಕಲಾಕೃತಿಗಳ ಪ್ರದರ್ಶನ, ಚಿತ್ರ ರಚನೆ, ಬೀದಿ ನಾಟಕ, ರಂಗಭೂಮಿಗೆ ಸಂಬಂಧಿಸಿದ ಕಾರ್ಯಾಗಾರ, ಯಕ್ಷಗಾನ ಮತ್ತು ಬಯಲಾಟ, ನೃತ್ಯ ಪ್ರದರ್ಶನ, ರಂಗಗೀತೆಗಳ ಗಾಯನ, ಸುಗಮ ಸಂಗೀತ ಸೇರಿ ಹಲವು ಕಾರ್ಯಕ್ರಮಗಳನ್ನು ಒಳಗೊಂಡ ರಂಗ ಪರಿಷೆ ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.