ಸಿದ್ಧಗಂಗೆಯಲ್ಲಿ ಜ್ಞಾನಗಂಗೆ ಹರಿಸಿದ ಭಗೀರಥ Siddagange

ಸಿದ್ಧಗಂಗೆಯಲ್ಲಿ ಜ್ಞಾನಗಂಗೆ ಹರಿಸಿದ ಭಗೀರಥ Siddagange
ಸಿದ್ಧಗಂಗೆಯಲ್ಲಿ ಜ್ಞಾನಗಂಗೆ ಹರಿಸಿದ ಭಗೀರಥ Siddagange
Published on
ಮಡಿವಾಳ: ಮಾಲೂರು ತಾಲೂಕು ಅಖಿಲ ಭಾರತ ವೀರಶೈವ ಸಮಾಜದ ಕಚೇರಿಯಲ್ಲಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ 119ನೇ ಜನ್ಮದಿನಾಚರಣೆ ಆಚರಿಸಲಾಯಿತು.Siddagange
ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಶಿವಶಂಕರಪ್ಪ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಜೀವನ ಒಂದು ಪವಾಡ ಅವರು ಕೊನೆಯವರೆಗೂ ಕ್ರೀಯಾಶಿಲರಾಗಿ ಯತಿಗಳಿಗೆ ಆದರ್ಶ ಪುರುಷರಾಗಿ, ದೇಶದ ರತ್ನ, ಶ್ರೀಗಳು ದೇಶಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಸಿದ್ಧಗಂಗೆಯಲ್ಲಿ ಜ್ಞಾನಗಂಗೆ ಹರಿಸಿದ ಆಧುನಿಕ ಭಗೀರಥ ಅವರ ಕಾಯಕ ಸೇವೆ ಕರ್ನಾಟಕದ ಇತಿಹಾಸದಲ್ಲಿ ನೆಲೆಸಲಿದೆ ಅವರ ಆದರ್ಶ ತತ್ವಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು.
ಕಾರ್ಯದರ್ಶಿ ಉಮಾದೇವಿ ನಾಗರಾಜ್​, ಕೆ.ಸಿ.ಲಿಂಗೇಶ್​, ಪತ್ರಿಕಾ ಕಾರ್ಯದರ್ಶಿ ನಂಜುಂಡಪ್ಪ, ಯುವ ಘಟಕದ ಅಧ್ಯಕ್ಷ ಇ.ನವೀನ್​, ಚಂದ್ರಶೇಖರ್​, ಶಂಕರ್​, ವಿಶ್ವನಾಥ್​, ಲವಕುಶ, ಸೋಮಶೇಖರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net