ಕಾಂಗ್ರೆಸ್ ಸರ್ಕಾರದ ಕಳೆದ ಮೂರು ವರ್ಷದ ಆಡಳಿತವನ್ನು ಟೀಕಿಸಿದ ಅವರು, ಸರ್ಕಾರದ ಒಳಜಗಳದಿಂದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು. “ಆರ್ಥಿಕ ದುರ್ಬಳಕೆ, ಆಡಳಿತ ವೈಫಲ್ಯ ಮತ್ತು ಆಂತರಿಕ ಕಲಹಗಳಿಂದ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ. ರಾಜ್ಯದ ಸಾಲ ನಾಲ್ಕು ಪಟ್ಟು ಹೆಚ್ಚಾಗಿದೆ. ಕಾಂಗ್ರೆಸ್‌ನ ಒಳಜಗಳದಿಂದ ಕರ್ನಾಟಕ ಕನಿಷ್ಠ 20 ವರ್ಷ ಹಿಂದಕ್ಕೆ ಹೋಗಿದೆ,” ಎಂದು ಬೊಮ್ಮಾಯಿ ಹೇಳಿದರು.