ಸ್ವಯಂಚಾಲಿತ ಹೆಸರು ಬದಲಾವಣೆಗೆ ಬೆಸ್ಕಾಂ ಚಾಲನೆ

ಬೆಸ್ಕಾಂ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ಸ್ವಯಂಚಾಲಿತ ಹೆಸರು ಬದಲಾವಣೆಗೆ ಸಚಿವ ಕೆ.ಜೆ.ಜಾರ್ಜ್‌ಚಾಲನೆ ನೀಡಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಬೆಸ್ಕಾಂ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ಸ್ವಯಂಚಾಲಿತ ಹೆಸರು ಬದಲಾವಣೆಗೆ ಸಚಿವ ಕೆ.ಜೆ.ಜಾರ್ಜ್‌ಚಾಲನೆ ನೀಡಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಯಂಚಾಲಿತ ಹೆಸರು ಬದಲಾವಣೆಗೆ ಬೆಸ್ಕಾಂ ಚಾಲನೆ
  • ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಜಾರಿ
  • ಹೆಸರು ಬದಲಾವಣೆ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ

ಬೆಂಗಳೂರು: ಬೆಸ್ಕಾಂವ್ಯಾಪ್ತಿಯ 8ಜಿಲ್ಲೆಗಳ ನಗರಪ್ರದೇಶಗಳಲ್ಲಿನ ವಿದ್ಯುತ್ಸ್ಥಾವರಗಳ ಹೆಸರು ಬದಲಾವಣೆಪ್ರಕ್ರಿಯೆಯನ್ನು ಸಂಪೂರ್ಣವಾಗಿಡಿಜಿಟಲೀಕರಣಗೊಳಿಸಲಾಗಿದ್ದು,ಸ್ವಯಂಚಾಲಿತಪ್ರಕ್ರಿಯೆಯಾಗಿರುವ ಈ ಸೌಲಭ್ಯಒದಗಿಸಿದ ದೇಶದ ಮೊದಲ ವಿದ್ಯುತ್ವಿತರಣಾ ಕಂಪನಿ ಎಂಬ ಹೆಗ್ಗಳಿಕೆಗೆಬೆಸ್ಕಾಂ ಭಾಜನವಾಗಿದೆ.

ಡಿಜಿಟಲ್ವೇದಿಕೆಗೆ ಗುರುವಾರ ಚಾಲನೆ ನೀಡಿಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್,ಗ್ರಾಹಕರುಬೆಸ್ಕಾಂ ಕಚೇರಿಗೆ ಭೇಟಿ ನೀಡದೆತಾವು ಕುಳಿತಲ್ಲಿಂದಲೇ ವಿದ್ಯುತ್ಸಂಪರ್ಕದ ಹೆಸರು ಬದಲಾಯಿಸಿಕೊಳ್ಳಬಹುದು.ಐಟಿ ಬಳಸಿ ಪಾರದರ್ಶಕಹಾಗೂ ಗುಣಮಟ್ಟದ ಸೇವೆ ನೀಡುವಇಲಾಖೆಯ ಪ್ರಮುಖ ಯೋಜನೆ ಇದಾಗಿದೆ.ಜಿಬಿಎ ವ್ಯಾಪ್ತಿಯಇ-ಖಾತಾಮ್ಯೂಟೇಷನ್ ಹೊಂದಿರುವ ಹಾಗೂಬೆಸ್ಕಾಂ ನಗರ ಪ್ರದೇಶದಲ್ಲಿರುವಆಸ್ತಿ ಇ-ಪಿಐಡಿಹೊಂದಿರುವ ಅಥವಾ ಹೊಂದಿಲ್ಲದಗ್ರಾಹಕರು ಈ ಸೇವೆ ಪಡೆಯಬಹುದುಎಂದು ಸಚಿವರು ತಿಳಿಸಿದರು.

ಹಿಂದೆಕ್ರಯಪತ್ರ,ನಿರಾಕ್ಷೇಪಣಾಪತ್ರ, ತೆರಿಗೆರಶೀದಿ, ನಷ್ಟಪರಿಹಾರ ಪತ್ರಗಳಂತಹ ಭೌತಿಕದಾಖಲೆಗಳನ್ನು ಸಲ್ಲಿಸಬೇಕಾಗಿತ್ತು.ಈಗ ಯಾವುದೇಕಾಗದಪತ್ರಗಳ ಅಗತ್ಯವಿಲ್ಲದೆಹೆಸರು ಬದಲಿಸಿಕೊಳ್ಳಬಹುದು.

ಸಂಪೂರ್ಣಡಿಜಿಟಲ್ ಪ್ರಕ್ರಿಯೆ

ಬೆಸ್ಕಾಂRAPDRPWeb Self-Service (WSS) ಪೋರ್ಟಲ್ಮೂಲಕ ಅರ್ಜಿ ಸಲ್ಲಿಕೆ,ವಿವರಗಳ ಅಪ್‌ಲೋಡ್,-ಸ್ಟಾಂಪಿಂಗ್ಮತ್ತು ಇ-ಸೈನ್ಪ್ರಕ್ರಿಯೆ ಪೂರ್ಣಗೊಳಿಸಬಹುದು.

100ರೂ.ಅರ್ಜಿಶುಲ್ಕ ಹಾಗೂ 1,194ರೂ.-ಸ್ಟಾಂಪ್ಶುಲ್ಕವನ್ನು ಪೋರ್ಟಲ್‌ನಲ್ಲೇಪಾವತಿಸಬೇಕು.ಡಿಜಿಟಲ್ ಸಹಿಪೂರ್ಣಗೊಂಡ ತಕ್ಷಣ ಅಧಿಕೃತದೃಢೀಕರಣ ಪತ್ರವನ್ನು ಡೌನ್‌ಲೋಡ್ಮಾಡಿಕೊಳ್ಳಬಹುದು.

ಪ್ರಾಯೋಗಿಕವಾಗಿಆರಂಭಗೊಂಡ ದಿನದಿಂದ 31,000ಕ್ಕೂಹೆಚ್ಚು ಸಂಪರ್ಕಗಳ ಹೆಸರು ಬದಲಾವಣೆಪೂರ್ಣಗೊಂಡಿದ್ದು,ವಾರಕ್ಕೆ 2,000ಕ್ಕೂಹೆಚ್ಚು ಅರ್ಜಿಗಳು ವಿಲೇವಾರಿಯಾಗುತ್ತಿವೆ.ಮಾನವ ಹಸ್ತಕ್ಷೇಪವಿಲ್ಲದೆಕ್ಷಣಾರ್ಧದಲ್ಲಿ ಈ ಸೇವೆ ದೊರೆಯಲಿದೆಎಂದು ಬೆಸ್ಕಾಂ ವ್ಯವಸ್ಥಾಪಕನಿರ್ದೇಶಕ ಡಾ.ಎನ್.ಶಿವಶಂಕರತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಪಾರದರ್ಶಕ ಹಾಗೂ ಉತ್ಕೃಷ್ಟ ಸೇವೆ ಸಲ್ಲಿಸುವ ಇಂಧನ ಇಲಾಖೆಯ ಮಹತ್ವದ ಯೋಜನೆ ಇದಾಗಿದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳು ಹಾಗೂ ಉಳಿದ ನಾಲ್ಕು ಎಸ್ಕಾಂಗಳಿಗೂ ವಿಸ್ತರಿಸಲಾಗುವುದು

— ಕೆ.ಜೆ.ಜಾರ್ಜ್, ಇಂಧನ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net