ಬೆಂಗಳೂರು:ಸಾಮಾನ್ಯವಾಗಿ ಬೆಂಗಳೂರಿನ ಪಾರ್ಕ್‌ನಲ್ಲಿ ಹಿರಿಯರು ವಾಕಿಂಗ್ ಅಥವಾ ಯಾರೊಂದಿಗಾದರೂ ಮನೆ ಸುದ್ದಿ ಮಾತಾಡುತ್ತಾ ಕುಳಿತಿರುತ್ತಾರೆ. ಇನ್ನು ಪುರುಷರು ದೇಶದ ಸುದ್ದಿ, ಕರ್ನಾಟಕದ ಬಗ್ಗೆ ಹರಡೆಯೊಡೆಯುತ್ತಾರೆ. ಆದರೆ, ಇಲ್ಲೊಬ್ಬ ವೃದ್ಧೆ ವಯಸ್ಸಾಗಿದೆ ಎನ್ನುವ ನಿರಾಸೆಯನ್ನು ತೊರೆದು ಜೋಶ್ನಲ್ಲಿ ಓಪನ್ ಜಿಮ್‌ನ 'ಏರ್ ಸ್ವಿಂಗ್' ಮೇಲೆ ನಿಂತು ಭರ್ಜರಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.