ಮನೆಯಲ್ಲಿ ಇರೋಕೆ ಆಗ್ತಿಲ್ಲಪ್ಪಾ..! ಸುಡುವ ಬಿಸಿಲಿಗೆ ಹೆದರಿ ಹೋಟೆಲ್ ರೂಮ್ ಬುಕ್ ಮಾಡಿದ ಬೆಂಗಳೂರು ಮಹಿಳೆ.. Bengaluru temperature

Bengaluru temperature (ಚಿತ್ರ Instagram)
Bengaluru temperature (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ
  • ಜನಸಾಮಾನ್ಯರು ಮನೆಯೊಳಗೆ ಇರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
  • ಮನೆಯಲ್ಲಿ ಶಾಖವನ್ನು ತಡೆಯಲಾರದೇ ಪಕ್ಕದಲ್ಲೇ ಇರುವಂತಹ ಹೋಟೆಲ್​ವೊಂದನ್ನು ಬುಕ್​ ಮಾಡಿದ್ದಾರೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಮನೆಯೊಳಗೆ ಇರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ, ಬೆಂಗಳೂರಿನ ಮಹಿಳೆಯೊಬ್ಬರು (Bengaluru temperature) ಬಿಸಿಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಂಡುಕೊಂಡ ಮಾರ್ಗವೊಂದು ಸದ್ಯ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ.

ಘಟನೆ ಏನು?

ಬೆಂಗಳೂರಿನ ನಿವಾಸಿ ಪ್ರಿಯಾ ಪಾಲ್ ಎಂಬುವವರು ತೀವ್ರವಾದ ಶಾಖವನ್ನು ಸಹಿಸಲಾರದೇ ದಿನದ ಹವಾನಿಯಂತ್ರಣವನ್ನು ಆನಂದಿಸಲು ಹತ್ತಿರದ ಹೋಟೆಲ್​ವೊಂದಕ್ಕೆ ಪ್ರವೇಶ ಪಡೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆದಾಗ್ಯೂ, ಪ್ರಿಯಾ ತಮ್ಮ ಮನೆಯಲ್ಲಿ ಶಾಖವನ್ನು ತಡೆಯಲಾರದೇ ಪಕ್ಕದಲ್ಲೇ ಇರುವಂತಹ ಹೋಟೆಲ್​ವೊಂದನ್ನು ಬುಕ್​ ಮಾಡಿರುವುದಾಗಿ ವಿಡಿಯೋದಲ್ಲಿ ತೋರಿಸಲಾಗಿದೆ.
ಪ್ರಿಯಾ ತನ್ನ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸುತ್ತಾ, ಮೊದಲಿಗೆ ಮಳೆ ಬರಬಹುದೆಂದು ನಿರೀಕ್ಷಿಸಿದೆ ಆದರೆ ಅದು ಬರಲಿಲ್ಲ. ಅದಕ್ಕಾಗಿ ಕೂಲರ್​ ಮತ್ತು ಎಸಿಯನ್ನು ಖರೀದಿಸಲು ಮುಂದಾದೆ ಆದರೆ ತಕ್ಷಣವೇ ಡೆಲಿಯಾಗಲು ಸಾಧ್ಯವಾಗಿರಲಿಲ್ಲ. ಬದಲಾಗಿ ಏಳು ದಿನಗಳು ಬೇಕಾಗುತ್ತದೆ ಎಂದು ತಿಳಿಸಿದರು.
ಆದಾಗ್ಯೂ, ಹವಾನಿಯಂತ್ರಣಗಳು ಇಲ್ಲದೇ ಕಾಲ ಕಳೆಯುವುದು ತುಂಬಾ ಕಷ್ಟಕರವಾಗಿರುವುದರಿಂದ ಬಾಡಿಗೆಗೆ ಪಡೆಯಲು ಪ್ರಯತ್ನಿಸಿದೆ. ಆದರೆ, ನಾನಿರುವಂತಹ ಪ್ರದೇಶಗಳಲ್ಲಿ ಸಾಧನಗಳು ಬಾಡಿಗೆಗೆ ಲಭ್ಯವಿರಲಿಲ್ಲ ಎಂದು ಹೇಳಿದರು.
ಕೊನೆಗೆ ಆನ್‌ಲೈನ್‌ನಲ್ಲಿ ಕೂಲರ್ ಬುಕ್ ಮಾಡಿದೆ. ಅವರು ಸೋಮವಾರ ತಲುಪಿಸುವುದಾಗಿ ತಿಳಿಸಿದರು. ಹಾಗಾಗಿ ಭಾನುವಾರವನ್ನು ಹೋಟೆಲ್​ನಲ್ಲಿ ಕಳೆಯಲು ನಿರ್ಧರಿಸಿದೆ. ಹೊರಗೆ ಊಟ ಮಾಡುವ ಬದಲು ಹೋಟೆಲ್​ನಲ್ಲಿಯೇ ಉಳಿದು, ನೆಟ್‌ಫ್ಲಿಕ್ಸ್ ವೀಕ್ಷಿಸಿ, ವಿಶ್ರಾಂತಿ ಪಡೆಯಲು ನಿರ್ಧರಿಸಿದೆ. ಇದು ಒಳ್ಳೆಯ ನಿರ್ಧಾರದಂತೆ ತೋರಿಸುತ್ತದೆ ಎಂದು ಹೇಳಿದರು.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಎಸಿ ಖರೀದಿಸುವುದು ಅಥವಾ ಬಾಡಿಗೆಗೆ ಪಡೆಯುವುದು ಹೆಚ್ಚು ಉತ್ತಮವಾಗಿರುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಬೇಸಿಗೆಯಲ್ಲಿ ವಿದ್ಯುತ್ ಕಡಿತವಾದಾಗ ನಾನು ಇದರ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net