ಅದೊಂದು ವಿಷಯ ಒಪ್ಪಲು ಸಾಧ್ಯವಿಲ್ಲ... ಪಿಜಿಯ 7ನೇ ಮಹಡಿಯಿಂದ ಜಿಗಿದು ಪ್ರೇಯಸಿ ದುರಂತ ಸಾವು! ಯುವಕನ ಸ್ಥಿತಿ ಗಂಭೀರ | Bengaluru Techie

ಮೃತ ಜನನಿ (23), ಮಣಿವೇಲು (30)
ಮೃತ ಜನನಿ (23), ಮಣಿವೇಲು (30)
Published on

ಪ್ರಮುಖ ಮುಖ್ಯಾಂಶಗಳು

  • ಕೋಲಿವಿಂಗ್ ಪಿಜಿಯಲ್ಲಿ ಒಟ್ಟಿಗೆ ಇದ್ದ ಪ್ರೇಮಿಗಳ ಪೈಕಿ ಯುವತಿ ಸಾವು
  • ಪಿಜಿಯ 7ನೇ ಮಹಡಿಯಿಂದ ಜಿಗಿದು ಪ್ರೇಯಸಿ ದುರಂತ ಅಂತ್ಯ, ಯುವಕನ ಸ್ಥಿತಿ ಗಂಭೀರ
  • ಸಾವಿಗೂ ಮುನ್ನ ನಡೆದ ಆ ಜಗಳದಿಂದಲೇ ಸಾಯುವಂತ ಕಟು ನಿರ್ಧಾರ ಕೈಗೊಂಡ ಶಂಕೆ
ಬೆಂಗಳೂರು: ನಗರದ ವೈಟ್‌ಫೀಲ್ಡ್‌ನ ಖಾಸಗಿ ಕೋಲಿವಿಂಗ್ ಪಿಜಿಯ 7ನೇ ಮಹಡಿಯಿಂದ ಬಿದ್ದು ಟೆಕ್ಕಿ (Bengaluru Techie) ದುರಂತವಾಗಿ ಸಾವನ್ನಪ್ಪಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್​ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಪುದುಚೇರಿಯ ಉಲೈವಾಯ್‌ಕ್ಕಲ್ ಮೂಲದ ಜನನಿ (23) ಎಂದು ಗುರುತಿಸಲಾಗಿದೆ. ಈಕೆ ಬೆಂಗಳೂರಿನ ಸಂಸ್ಥೆಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಇನ್ನೂ, ಆಕೆಯ ಜತೆಗಿದ್ದ ಯುವಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಪುದುಚೇರಿಯ ನಲ್ಲತ್ತೂರು ಮೂಲದ ಮಣಿವೇಲು (30) ಎನ್ನಲಾಗಿದೆ. ಈತ ಖಾಸಗಿ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಪ್ರಾಥಮಿಕ ವರದಿಗಳ ಪ್ರಕಾರ, ಆ.30ರ ಬೆಳಗ್ಗೆ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು, ಸಿಡಿಮಿಡಿಗೊಂಡ ಜನನಿ, ಪಿಜಿಯ ಟಾಪ್​ ಫ್ಲೋರ್​ಗೆ ಹೋಗಿ, ಅಲ್ಲಿಂದ ಕೆಳಗೆ ಧುಮುಕಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆಕೆಯನ್ನು ತಡೆಯಲು ಹೋದ ಮಣಿವೇಲು ಕೈಯನ್ನು ಕೆಳಗೆ ಎಳೆದ ಪರಿಣಾಮ, ಇಬ್ಬರೂ 7ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಜಗಳಕ್ಕೆ ಯುವಕನ ಎಂಗೇಜ್​ಮೆಂಟ್​ ಕಾರಣ!

ಕಳೆದ ಆರು ವರ್ಷಗಳಿಂದ ಪ್ರೀತಿಯ ಸಂಬಂಧದಲ್ಲಿದ್ದ ವೇಲು, ಇತ್ತೀಚೆಗಷ್ಟೇ ಮತ್ತೊಬ್ಬ ಯುವತಿಯೊಂದಿಗೆ ಎಂಗೇಜ್​ಮೆಂಟ್​ ಆಗಿರುವ ವಿಚಾರಕ್ಕೆ ಜನನಿ ಜಗಳವಾಡಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಟಾಪಟಿ ನಡೆಯುತ್ತಿತ್ತು. ಭಾನುವಾರವು ಅದೇ ರೀತಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ, ಮಹಡಿಗೆ ಹೋದ ಟೆಕ್ಕಿ, ಸಾಯುವ ನಿರ್ಧಾರ ಕೈಗೊಂಡಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ.
ಕೆಳಗೆ ಬಿದ್ದ ರಭಸಕ್ಕೆ ಜನನಿ ಸ್ಥಳದಲ್ಲೇ ಮೃತಪಟ್ಟರೆ, ಮಣಿವೇಲು ಕೆಳಗೆ ಬೀಳುವಾಗ ಮಧ್ಯದಲ್ಲಿದ್ದ ಮರದ ಕೊಂಬೆಗಳಿಗೆ ಸಿಲುಕಿ ನಂತರ ನೆಲಕ್ಕೆ ಬಿದ್ದಿದ್ದರಿಂದ ಸಾವಿನಿಂದ ಪಾರಾಗಿದ್ದಾನೆ. ತೀವ್ರ ಗಾಯಗೊಂಡಿರುವ ಹಿನ್ನೆಲೆ ಆತನನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರ ನಡುವಿನ ಗಲಾಟೆಗೆ ಸ್ಪಷ್ಟ ಕಾರಣವೇನು ಹಾಗೂ ದುರಂತದ ನೈಜ ಸನ್ನಿವೇಶದ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net