

ಪ್ರಮುಖ ಮುಖ್ಯಾಂಶಗಳು
ರವಿ ನಾಯಕ್
ಬೆಂಗಳೂರು:
ದೇಶದಲ್ಲೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಹೊಂದಿರುವ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸೃ್2025 ವರದಿ ಪ್ರಕಾರ, ನಗರದಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ 9 ಸೆಕೆಂಡುಗಳು ಬೇಕಾಗುತ್ತಿದ್ದು, ಭಾರತದಲ್ಲೇ ಅತಿ ನಿಧಾನಗತಿಯಲ್ಲಿ ವಾಹನಗಳು ಸಂಚರಿಸುವ ನಗರ ಎಂಬ ದಾಖಲೆ ನಿರ್ಮಿಸಿದೆ.