ಮಹಿಳೆಯರ ವಾಸಕ್ಕೆ ಬೆಂಗಳೂರೇ ಬೆಸ್ಟ್: ದೇಶದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿಗೆ ಮೊದಲ ಸ್ಥಾನ.. bengaluru
bengaluru
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಹಿಳೆಯರಿಗೆ ಬೆಂಗಳೂರೇ ನಂಬರ್ 1
ವಾಸ ಮತ್ತು ಕೆಲಸಕ್ಕೆ ಸಿಲಿಕಾನ್ ಸಿಟಿ ದೇಶದಲ್ಲೇ ಬೆಸ್ಟ್!
ಬೆಂಗಳೂರು: ( bengaluru) ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಮ್ಮೆ ತನ್ನ ಹೆಮ್ಮೆಯ ಕಿರೀಟಕ್ಕೆ ಹೊಸ ಗರಿಯನ್ನು ಸೇರಿಸಿಕೊಂಡಿದೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸ ಮಾಡಲು ಮತ್ತು ವಾಸಿಸಲು ಭಾರತದ ಅತ್ಯಂತ ಸುರಕ್ಷಿತ ಹಾಗೂ ಸುಸಜ್ಜಿತ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ.
'ಅವತಾರ್ ಗ್ರೂಪ್' ಬಿಡುಗಡೆ ಮಾಡಿರುವ 'ಟಾಪ್ ಸಿಟೀಸ್ ಫಾರ್ ವುಮೆನ್ ಇನ್ ಇಂಡಿಯಾ (TCWI) 2025' ವರದಿಯಲ್ಲಿ ಬೆಂಗಳೂರು ಅಗ್ರಸ್ಥಾನವನ್ನು ಅಲಂಕರಿಸಿದೆ.
ಕೆಲಸದ ಸ್ಥಳದಲ್ಲಿ ಮಹಿಳೆಯರ ಒಳಗೊಳ್ಳುವಿಕೆ, ಅವರಿಗೆ ಸಿಗುತ್ತಿರುವ ಉದ್ಯೋಗಾವಕಾಶಗಳು, ವೃತ್ತಿಜೀವನದಲ್ಲಿ ಬೆಳೆಯಲು ಇರುವ ಪೂರಕ ವಾತಾವರಣ ಮತ್ತು ಸಾಮಾಜಿಕ ಸುರಕ್ಷತೆಯನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ.
ದೇಶದ ಒಟ್ಟು 125 ನಗರಗಳನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ಇದರಲ್ಲಿ ಬೆಂಗಳೂರು 53.29 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ತಮಿಳುನಾಡಿನ ಚೆನ್ನೈ (49.86) ಎರಡನೇ ಸ್ಥಾನದಲ್ಲಿದ್ದರೆ, ಪುಣೆ (46.27), ಹೈದರಾಬಾದ್ (46.04) ಮತ್ತು ಮುಂಬೈ (44.49) ನಂತರದ ಸ್ಥಾನಗಳಲ್ಲಿವೆ.
ಬೆಂಗಳೂರು ಕೈಗಾರಿಕಾ ಸೇರ್ಪಡೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಬುದ್ಧ ಕಾರ್ಪೊರೇಟ್ ಪರಿಸರ ವ್ಯವಸ್ಥೆ, ಔಪಚಾರಿಕ ಉದ್ಯೋಗದ ಆಳ ಮತ್ತು ವೈವಿಧ್ಯತೆ ಮತ್ತು ಸೇರ್ಪಡೆ ಅಭ್ಯಾಸಗಳ ವ್ಯಾಪಕ ಅಳವಡಿಕೆ ಅದಕ್ಕೆ ಸ್ಪಷ್ಟವಾದ ಮೇಲುಗೈ ನೀಡುತ್ತಿದೆ.
ಟಾಪ್ 10 ನಗರಗಳಲ್ಲಿ ಬೆಂಗಳೂರು, ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಗುರುಗ್ರಾಮ್, ಕೋಲ್ಕತ್ತಾ, ಅಹಮದಾಬಾದ್, ತಿರುವನಂತಪುರಂ ಮತ್ತು ಕೊಯಮತ್ತೂರು ಸೇರಿವೆ.
ಬೆಂಗಳೂರು ಅಗ್ರಸ್ಥಾನಕ್ಕೇರಲು ಕಾರಣಗಳೇನು?
ಬೆಂಗಳೂರು ನಗರವು ಮುಖ್ಯವಾಗಿ 'ಕೈಗಾರಿಕಾ ಒಳಗೊಳ್ಳುವಿಕೆ' (Industrial Inclusion) ವಿಭಾಗದಲ್ಲಿ ದೇಶದ ಇತರ ನಗರಗಳಿಗಿಂತ ಮುಂದಿದೆ. ಇಲ್ಲಿನ ಐಟಿ-ಬಿಟಿ ಕಂಪನಿಗಳಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಆದ್ಯತೆ, ಕೌಶಲ್ಯಾಭಿವೃದ್ಧಿಗೆ ಇರುವ ಅವಕಾಶಗಳು ಮತ್ತು ಲಿಂಗ ಸಮಾನತೆಯ ನೀತಿಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಿವೆ. ವೃತ್ತಿಜೀವನದ ಬೆಳವಣಿಗೆಗೆ ಬೆಂಗಳೂರು ಅತ್ಯಂತ ಆಶಾದಾಯಕ ನಗರ ಎಂದು ವರದಿ ಬೆಟ್ಟು ಮಾಡಿದೆ.
ಅಗ್ರ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸೇರಿ ದಕ್ಷಿಣದ ಐದು ನಗರಗಳು ಸ್ಥಾನ ಪಡೆದಿವೆ. ಸಾಮಾಜಿಕ ಸುರಕ್ಷತೆ ಮತ್ತು ಸಾರ್ವಜನಿಕ ಸೇವೆಗಳ ವಿಷಯದಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿದ್ದರೂ, ಒಟ್ಟಾರೆ ವೃತ್ತಿಪರ ಅವಕಾಶಗಳ ವಿಷಯದಲ್ಲಿ ಬೆಂಗಳೂರು ಜಯಭೇರಿ ಬಾರಿಸಿದೆ.
ಮಹಿಳೆಯರು ಕೇವಲ ಉದ್ಯೋಗಿಗಳಾಗಿ ಮಾತ್ರವಲ್ಲದೆ, ಉದ್ದಿಮೆದಾರರಾಗಿ ಬೆಳೆಯಲು ಬೇಕಾದ ಪೂರಕ ಪರಿಸರ ಬೆಂಗಳೂರಿನಲ್ಲಿದೆ ಎಂಬುದು ಈ ವರದಿಯ ಸಾರಾಂಶ. ದೆಹಲಿ ಮತ್ತು ಗುರುಗ್ರಾಮದಂತಹ ನಗರಗಳು ಉದ್ಯೋಗಾವಕಾಶದಲ್ಲಿ ಮುಂದಿದ್ದರೂ, ಸುರಕ್ಷತೆ ಮತ್ತು ವಾಸದ ಗುಣಮಟ್ಟದ ವಿಷಯದಲ್ಲಿ ಬೆಂಗಳೂರಿಗಿಂತ ಹಿಂದೆ ಬಿದ್ದಿವೆ.