ಹೆಬ್ಬಾವು ಪತ್ತೆಯಾದ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಈ ನಕಲಿ ಡಾಕ್ಟರ್ನ ಮತ್ತೊಂದು ಅತ್ಯಂತ ಕರಾಳ ಮತ್ತು ವಿಕೃತ ಮುಖ ಬಯಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ನೀಡುವ ನೆಪದಲ್ಲಿ ಈತ ತನ್ನ ಬಳಿ ಬರುತ್ತಿದ್ದ ಗಂಡು ರೋಗಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗಂಡು ರೋಗಿಯೊಬ್ಬನ ಜೊತೆ ಈತ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತಿರುವ ವಿಡಿಯೋ ಕೂಡ ಲಭ್ಯವಾಗಿದ್ದು, ಹಲವರ ಜೊತೆ ಈತ ಇದೇ ರೀತಿ ವಿಕೃತಿ ಮೆರೆದಿರುವುದು ಪತ್ತೆಯಾಗಿದೆ. ಗಂಡಸರು ಮಾತ್ರವಲ್ಲದೆ, ಮಹಿಳೆಯರನ್ನೂ ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ವಿಡಿಯೋವನ್ನು ರೆಕಾರ್ಡ್ ಮಾಡಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂಬ ಆರೋಪವಿದೆ. ಅಲ್ಲದೆ, ಲೈಂಗಿಕವಾಗಿ ಬಳಸಿಕೊಳ್ಳುವುದನ್ನೇ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಎಂದು ನಂಬಿಸುತ್ತಿದ್ದ ಈತನ ಕಾಟಕ್ಕೆ ಬೇಸತ್ತಿದ್ದ ರೋಗಿಗಳು, ಸಮಾಜದಲ್ಲಿ ಮರ್ಯಾದೆಗೆ ಅಂಜಿ ಇದುವರೆಗೆ ಯಾರೂ ದೂರು ನೀಡಿರಲಿಲ್ಲ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಹೆಬ್ಬಾವು ಸಾಗಣೆ ಹಾಗೂ ವಂಚನೆ ಮತ್ತು ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಈ ನಕಲಿ ವೈದ್ಯನ ವಿರುದ್ಧ ಕಠಿಣ ತನಿಖೆ ಮುಂದುವರಿಸಿದ್ದಾರೆ.