ಫೋನ್ ಪೇನ ಮೇಸೆಜ್​ನಲ್ಲಿ ಅಡಗಿತ್ತು ಮರ್ಡರ್ ಮಿಸ್ಟ್ರಿ: ಕೃತಿಕಾಳ ಕೊಂದ ಮಹೇಂದ್ರ ರೆಡ್ಡಿ ಅಸಲಿ ಮುಖ ರಿವೀಲ್....​Kruthika Reddy

Kruthika Reddy Murder Case
Kruthika Reddy Murder Case
Published on

ಪ್ರಮುಖ ಮುಖ್ಯಾಂಶಗಳು

  • ಚರ್ಮ ವೈದ್ಯೆ ಕೃತಿಕಾ ರೆಡ್ಡಿ ಕೊಂದ ಮಹೇಂದ್ರನ ಬಂಡವಾಳ ಬಯಲು
  • ಮಹೇಂದ್ರ ರೆಡ್ಡಿ ತನ್ನ ಪ್ರೇಯಸಿಗೆ ಕಳುಹಿಸಿದ್ದ ಮೆಸೇಜ್​ ರಿವೀಲ್ ಮಾಡಿದ FSL
  • ಫೋನ್​ ಪೇನಲ್ಲಿ ಸಾಲು ಸಾಲು ಮೆಸೇಜ್​ ಮಾಡಿ ತಗ್ಲಾಕ್ಕೊಂಡ ಮಹೇಂದ್ರ
ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​(Kruthika Reddy Murder Case) ಬೆಂಗಳೂರಿನ್ನೆ ಬೆಚ್ಚಿ ಬೀಳಿಸಿತ್ತು. ಆಕೆಗಿದ್ದ ರೋಗವನ್ನೇ ಕುಂಟು ನೆಪ ಮಾಡಿಕೊಂಡು, ಹೆಚ್ಚು ಅರವಳಿಕೆ ಕೊಟ್ಟು ಕೊಲೆ ಮಾಡಿದ್ದ. ಮೊದಲಿಗೆ ಸಹಜ ಸಾವು ಎಂದು ಬಿಂಬಿಸಿದ್ದ ಆತನ ಬಂಡವಾಳ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿತ್ತು.
ನಾನೇನೂ ಮಾಡಿಲ್ಲ. ಆಕೆಗೆ ರೋಗ ಇತ್ತು ಅದನ್ನು ಮುಚ್ಚಿಟ್ಟು ಮದುವೆ ಮಾಡಿದ್ರು ಅದಕ್ಕೆ ಕೊಂದೆ ಎನ್ನುತ್ತಿದ್ದ ಕೊಲೆಗಡುಕನ ಬಣ್ಣ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಕೃತಿಕಾ ರೆಡ್ಡಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಮಾರತ್ತಹಳ್ಳಿ ಪೊಲೀಸರು ಮಹೇಂದ್ರನ ಮೊಬೈಲ್​ ಅನ್ನು Forensic Science Laboratory (FSL) ನೀಡಿತ್ತು. ಆತನ ಮೊಬೈಲ್​ನಲ್ಲಿ ಎಲ್ಲಾ ಮೆಸೇಜ್​ಗಳನ್ನು FSL ತಂಡ ರಿಟ್ರೀವ್ ಮಾಡಲಾಗಿತ್ತು. ಇದು ಕೃತಿಕಾ ರೆಡ್ಡಿ ಕೊಲೆ ಕೇಸ್​​ಗೆ ಸಿಕ್ಕ ಪ್ರಮುಖ ಟೆಕ್ನಿಕಲ್ ಸಾಕ್ಷ್ಯವಾಗಿದೆ.

ಏನೆಲ್ಲ ಮಾಹಿತಿ ಸಿಕ್ಕಿದೆ?

ತನ್ನ ಪ್ರಿಯತಮೆಗೆ ಮಹೇಂದ್ರ ರೆಡ್ಡಿ. ಸಾಕಷ್ಟು ಮೆಸೇಜ್ ಮಾಡಿದ್ದ. ಆತನ ಮೊಬೈಲ್​ನಿಂದ 10.34 ಲಕ್ಷಕ್ಕಿಂತ ಹೆಚ್ಚು ಡಿಜಿಟಲ್ ಫೈಲ್‌ಗಳನ್ನು, 485 PhonePe ಚಾಟ್‌ಗಳನ್ನು ಎಫ್.ಎಸ್.ಎಲ್ ಟೀಂ ಹೊರತೆಗೆದಿದೆ. ಕೊಲೆ ಮಾಡಿರುವುದರಿಂದ ತಪ್ಪೊಪ್ಪಿಕೊಳ್ಳುವ ರೀತಿಯ ಸಂದೇಶಗಳು, ಅಳಿಸಲಾದ ದಾಖಲೆಗಳು ದೊರಕಿದೆ.

ಮಹೇಂದ್ರ ತನ್ನ ಪ್ರಿಯತಮೆ ಮೆಸೇಜ್ ಮಾಡಿದ್ದು ಹೀಗೆ...

ಈ ಮೆಸೇಜ್ ನೋಡಿದ ತಕ್ಷಣ ಓದಿ ಸುಮ್ಮನಾಗಿ. ನನಗೆ ರಿಪ್ಲೈ ಮಾಡಲು ಅಥವಾ ಕಾಲ್ ಮಾಡೋಕೆ ಹೋಗ್ಬೇಡಿ. ಪರಿಸ್ಥಿತಿ ಸರಿ ಹೋದ ಮೇಲೆ ನಾನೇ ನಿಮಗೆ ಕರೆ ಮಾಡ್ತೇನೆ. ಪೊಲೀಸರು ನಮ್ಮಿಬ್ಬರ ಸಂಬಂಧದ ಬಗ್ಗೆ ನಿಮ್ಮ ಬಗ್ಗೆ ಮಾಹಿತಿ ಕೇಳಬಹುದು. ಏನು ಹೇಳ್ಬೇಡಿ ಸ್ನೇಹಿತ ಅನ್ನಿ. ಪದೇ ಪದೆ ಕಾಲ್ ಮಾಡಿದ್ಯಾಕೆ ಅಂತ ಕೇಳುತ್ತಾರೆ. ಸಹಾಯಕ್ಕಾಗಿ ಎಂದು ಮಾತ್ರ ಹೇಳಿ ಎನ್ನುವುದಾಗಿ ಟೆಕ್ಸ್ಟ್​ ಮಾಡಿದ್ದಾನೆ.
ಮುಂದುವರೆದು, ನಾನು ಅತ್ಯಂತ ಶೀಘ್ರದಲ್ಲೇ ನಾನೇ ಕೃತಿಕಾಳನ್ನು ಕೊಲೆ ಮಾಡಿದ್ದು. ನನ್ನ ಬಳಿ ಸಾಕ್ಷಿ ಇಲ್ಲ ಎಂದು ಹೇಳುತ್ತೇನೆ. ಜೈಲಿಗೆ ಹೋಗುತ್ತೇನೆ, ನೀವು ಸೇರಿ ಎಲ್ಲರು ಖುಷಿಯಾಗಿರ್ತೀರಿ ಅಂತ ನಾನು ಭಾವಿಸ್ತೇನೆ. ಇಲ್ಲಿಗೆ ಇದೆಲ್ಲ ಸಾಕು. ನಿಮ್ಮ ಜೀವನ ಚೆನ್ನಾಗಿರಲಿ. ಖುಷಿಯಾಗಿರಿ, ನೀವು ನಾನು ಹೇಗೆ ಬಾಳಬೇಕು ಎಂದು ಬಯಸುತ್ತಿದ್ದೀರೋ ಹಾಗೆ ಬದುಕುತ್ತೇನೆ. ನೀವು ಬಯಸಿದಂತೆಯೇ ಸಾಯುತ್ತೇನೆ. ಕೊಲೆಗಾರ ಎಂದಿಗೂ ಸಂತೋಷವಾಗಿರಲ್ಲ ಎಂದು ಹೇಳಿಕೊಂಡಿದ್ದಾನೆ.

ಜಾಮೀನು ವಜಾ

ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನಿಗಾಗಿ ಮಹೇಂದ್ರ ರೆಡ್ಡಿ ಅರ್ಜಿ ಸಲ್ಲಿಸಿದ್ದ. ಮಂಗಳವಾರ ಸೆಷನ್ಸ್ ಕೋರ್ಟ್ ನಲ್ಲಿ ಮಹೇಂದ್ರ ರೆಡ್ಡಿ ಜಾಮೀನು ಅರ್ಜಿ ವಜಾಗೊಳಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net