

ಬೆಂಗಳೂರು: ಬೆಂಗಳೂರಿನ ಸೂಪರ್ ಹೆಲ್ತ್ ಆಸ್ಪತ್ರೆಯೊಂದು ತನ್ನ ವೈದ್ಯಕೀಯೇತರ ವಿಭಾಗದ ಮಹಡಿಗಳಲ್ಲಿ 'ಲೈವ್ ಮ್ಯೂಸಿಕ್ ನೈಟ್' ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಲೊಕಲ್ ಹೋಸ್ಟ್ ಹೆಚ್‌ಕ್ಯೂ ಜೊತೆಗೂಡಿ ನಡೆಸಿದ ಈ ಕಾರ್ಯಕ್ರಮದ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯಂತಹ ಜಾಗದಲ್ಲಿ ಸಂಗೀತ ಕೂಟ ಅಗತ್ಯವೇ ಎಂಬ ಪ್ರಶ್ನೆಗಳು ಎದ್ದಿವೆ.