ಏನಮ್ಮಾ ಇಂಥಾ ಬಟ್ಟೆನಾ ಹಾಕೋದು ಅಂತಾ ಅಜ್ಜಿ ಬೈದಿದ್ದಕ್ಕೆ ಯುವತಿ ಕೊಟ್ಟ ಪ್ರತ್ಯುತ್ತರ ವೈರಲ್​...Women Dress Code

ಏನಮ್ಮಾ ಇಂಥಾ ಬಟ್ಟೆನಾ ಹಾಕೋದು ಅಂತಾ ಅಜ್ಜಿ ಬೈದಿದ್ದಕ್ಕೆ ಯುವತಿ ಕೊಟ್ಟ ಪ್ರತ್ಯುತ್ತರ ವೈರಲ್​...Women Dress Code
ಏನಮ್ಮಾ ಇಂಥಾ ಬಟ್ಟೆನಾ ಹಾಕೋದು ಅಂತಾ ಅಜ್ಜಿ ಬೈದಿದ್ದಕ್ಕೆ ಯುವತಿ ಕೊಟ್ಟ ಪ್ರತ್ಯುತ್ತರ ವೈರಲ್​...Women Dress Code
Published on

ಪ್ರಮುಖ ಮುಖ್ಯಾಂಶಗಳು

  • ನಿಕ್ಕರ್​ ತೊಟ್ಟು ರೀಲ್ಸ್​ ಮಾಡ್ತಿದ್ದ ಯುವತಿಗೆ ರಸ್ತೆ ಮಧ್ಯೆ ಬೈದಾಡಿದ ಅಜ್ಜಿ
  • ಈ ಜನರೇಶನ್​ನ ಕೊನೆ ಯಾವಾಗ ಎಂದು ಇನ್​ಸ್ಟಾಗ್ರಾಮ್​ ರೀಲ್ಸ್​ ಹಂಚಿಕೊಂಡ ಯುವತಿ
  • ನಮಗೆ ವಯಸ್ಸಾದಾಗ ಇನ್ನೊಬ್ಬರ ಬಟ್ಟೆ ಬಗ್ಗೆ ಪ್ರಶ್ನೆ ಮಾಡೋಲ್ಲ ನಾವು ಅದಂತು ನಿಜ ಎಂದ ನೆಟ್ಟಿಗರು
ಬೆಂಗಳೂರು: ಹೆಣ್ಣು ಮಕ್ಕಳು ಮೈತುಂಬಾ ಸೀರೆ ಉಟ್ಟರೆ ನೋಡಲು ಚಂದ, ಅರ್ಧಂಬರ್ಧ ಬಟ್ಟೆ (Women Dress COde) ಧರಿಸಿದ್ರೆ ಹುಡುಗರು ಕೆಟ್ಟದಾಗಿ ಬೈದು ಕೊಳ್ಳುತ್ತಾರೆ ಎಂದು ಸಿನಿಮಾ ಪ್ರೀ ರಿಲೀಸ್​ ಇವೆಂಟ್​ ವೇಳೆ ತೆಲುಗು ನಟ ಶಿವಾಜಿ ಮಾತನಾಡಿ ಭಾರಿ ವಿವಾದಕ್ಕೆ ಕಾರಣರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ಅಜ್ಜಿಯೊಬ್ಬರು ಯುವತಿಯೊಬ್ಬಳ ಉಡುಗೆ ತೊಡುಗೆ ಬಗ್ಗೆ ಪ್ರಶ್ನೆ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದೆ.
ಶ್ರಿಯಾಂಶಿ ಎಂಬಾಕೆ ತನ್ನ ಅಧಿಕೃತ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹಣ್ಣು ಹಣ್ಣಾದ ಮುದುಕಿಯೊಬ್ಬರು, ಆಕೆಯ ಬಳಿ ಬಂದು, ಬಟ್ಟೆಯ ಬಗ್ಗೆ ಮಾತನಾಡಿತ್ತಿರುವುದು ಸನ್ನೆಯ ಮುಖೇನ ತಿಳಿಯುತ್ತದೆ. ಆದರೆ, ಶ್ರಿಯಾಂಶಿಯವರು ಆಡಿಯೋ ಮ್ಯೂಟ್ ಮಾಡಿರುವ ಕಾರಣ ಅಜ್ಜಿ ಬೈದಿದ್ದಾದರು ಏನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಏನಮ್ಮಾ ನಿನ್ ಬಟ್ಟೆ ಇದು....?

ಶ್ರಿಯಾಂಶಿ ತನ್ನ ಸ್ನೇಹಿತರೊಂದಿಗೆ ಯಾವುದೋ ಕಂಟೆಂಟ್​​ಗೆ ವಿಡಿಯೋ ಮಾಡುತ್ತಿರುವ ವೇಳೆ ಸ್ಥಳಕ್ಕೆ ಬಂದ ಅಜ್ಜಿ ಆಕೆಯನ್ನು ಪ್ರಶ್ನೆ ಮಾಡುವುದು ಕಾಣುತ್ತದೆ. ಆಗ ಆಕೆ ಏನೂ ಮಾತನಾಡದೆ, ಅವರ ಮುಂದೆ ಐದಾರು ಬಾರಿ ಬಾಗುತ್ತಾಳೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡು...`ಬೆಂಗಳೂರಿನಲ್ಲಿ ಅಜ್ಜಿಯೊಬ್ಬರು ನಡುರಸ್ತೆಯಲ್ಲೇ ನನಗೆ ನಾನು ಧರಿಸಿರುವ ಬಟ್ಟೆ ಬಗ್ಗೆ ಪ್ರಶ್ನಿಸಿ, ನಿಂದಿಸಿದರು' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನು 28 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಇವ್ರ ಕೊನೆ ಎಂದು ಮಾರ್ರೆ?

ಕಾಮೆಂಟ್​ ಬಾಕ್ಸ್​ನಲ್ಲಿ ತಾನೇ ಮಸೇಜ್​ ಒಂದನ್ನು ಹಂಚಿಕೊಂಡಿರುವ ಶ್ರಿಯಾಂಶಿ, `ನನಗೆ ಸಾಕಾಗಿದೆ ಈ ಪೀಳಿಗೆಯವರ ಕೊನೆ ಯಾವಾಗ ಎಂದು ಹೇಳಿದ್ದಾರೆ. ಇದಕ್ಕೆ ಕೆಲವರು ಕಾಮೆಂಟ್ ಮಾಡಿದ್ದು, `ಪುರುಷರ ಹಿಂಸಾಚಾರಕ್ಕೆ ಇವರೆಲ್ಲ ಮೌನವಾಗಿ ಬಿಡುತ್ತಾರೆ. ಮಾತನಾಡೋದೆ ಇಲ್ಲ. ಆದರೆ ಇಂತಹ ವಿಚಾರ ಅಂತ ಬಂದ್ರೆ ಎಲ್ಲಿದ್ದರೂ ಹುಡುಗಿಯರಿಗೆ ಪ್ರವಚನ ಕೊಡೋಕೆ ಬಂದು ಬಿಡ್ತಾರೆ' ಎಂದು  its happen ಎಂಬ ಖಾತೆದಾರರು ಕಾಮೆಂಟ್ ಮಾಡಿದ್ದಾರೆ.

ಅಜ್ಜಿಯ ತಪ್ಪಿಲ್ಲ ವ್ಯವಸ್ಥೆಯದ್ದೇ ತಪ್ಪು

`ಮಹಿಳೆಯರು ಸ್ವತಂತ್ರ್ಯವಾಗಿ ಬದುಕೋದು ಇವರಿಗೆ ಆಗೋದಿಲ್ಲ' ಎಂದು ಒಬ್ಬಾಕೆ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಐನ್ಲಾ ಎಂಬುವವರು ಉತ್ತರಿಸಿದ್ದು, `ಇದು ಆಕೆಯ ತಪ್ಪಲ್ಲ. ಈ ಸಮಾಜ ಆಕೆಯನ್ನು ಹೀಗೆ ರೂಪುಗೊಳ್ಳುವಂತೆ ಮಾಡಿದೆ. ತಾನು ಒಳ್ಳೆಯದನ್ನೇ ಮಾಡುತ್ತಿದ್ದೇನೆ ಎಂದು ಆಕೆ ಭಾವಿಸಿದ್ದಾಳೆ.  ಆಕೆಗೇನೂ ಗೊತ್ತಿದೆ ಇಂದಿನ ಬದಲಾವಣೆ ಬಗ್ಗೆ' ಎಂದು ಅಜ್ಜಿಯ ಪರವಹಿಸಿಕೊಂಡಿದ್ದಾರೆ.
`ನನಗೆ ಒಂದಂತೂ ಖಚಿತವಾಗುತ್ತಿದೆ. ನಮಗೆ ವಯಸ್ಸಾದಾಗ ನಮ್ಮ ಮುಂದಿನ ಪೀಳಿಗೆಯವರಿಗೆ ಅವರ ಬಟ್ಟೆ ಬಗ್ಗೆ ಪ್ರಶ್ನೆ ಮಾಡೋದಿಲ್ಲ ಅದಂತೂ ಗ್ಯಾರಂಟಿ. ನಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನು ಮಾತ್ರ ಮಾಡಿಕೊಂಡು ಹೋಗುವುದನ್ನು ನಾವು ಕರಗತ ಮಾಡಿಕೊಳ್ಳಬೇಕು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net