ದುಬಾರಿ ಕಾರಿನ ಬಾನೆಟ್ ಮೇಲೆ ಕಾಂಕ್ರೀಟ್ ಮಿಶ್ರಣ ತಯಾರಿಸಿ, ಅದನ್ನು ರಸ್ತೆ ಗುಂಡಿಗೆ ಸುರಿದು ಮುಚ್ಚುತ್ತಾರೆ. ನೋಡುಗರಿಗೆ ಈ ವೇಳೆ ಒಂದು ಪ್ರಶ್ನೆ ಮೂಡುತ್ತದೆ. ಅದೇನೆಂದರೆ, ಕಾರಿನ ಬಾನೆಟ್ಗೆ ಏನು ಆಗುವುದಿಲ್ಲವೇ? ಅನ್ನೋದು. ಆದರೆ, ಆ ಪ್ರಶ್ನೆಗೆ ಅದೇ ವಿಡಿಯೋದಲ್ಲಿ ಉತ್ತರ ಸಿಕ್ಕಿದೆ. ರಸ್ತೆ ಗುಂಡಿಯನ್ನು ಮುಚ್ಚಿದ ಬಳಿಕ, ಬಾನೆಟ್ ಮೇಲೆ ಅಂಟಿಸಲಾಗಿದ್ದ ಪ್ಲಾಸ್ಟಿಕ್ ಹಾಳೆಯನ್ನು ಉದ್ಯಮಿ ತೆಗೆದುಹಾಕುತ್ತಾರೆ. ಬಳಿಕ ನೋಡಿದಾಗ ಬಾನೆಟ್ ಮೇಲೆ ಒಂದು ಸಣ್ಣ ಗೆರೆಯು ಕೂಡ ಆಗಿರುವುದಿಲ್ಲ. ಆದಾಗ್ಯೂ, ಇದು ಕಾರಿನ ರಕ್ಷಣೆಗಾಗಿ ಬಳಸುವ ಪಿಪಿಎಫ್ (ಪೇಂಟ್ ಪ್ರೊಟೆಕ್ಷನ್ ಫಿಲ್ಮ್) ಬಗ್ಗೆ ವಿವರಿಸುವ ಪ್ರಯತ್ನವಾಗಿದೆ ಎಂದು ತಿಳಿದುಬಂದಿದೆ.