ಸಿದ್ದೇಶ್ವರ ಜಾತ್ರೆಯಲ್ಲಿ ಹರಿದ ರಕ್ತ; ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯನ್ನು ಕೊಂದೇ ಬಿಟ್ರು ದುರುಳರು..Belagavi

Belagavi Murder
Belagavi Murder
Published on

ಬಂಧಿತರು ಯಾರು?

ಕೊಲೆಯಾದ ವ್ಯಕ್ತಿಯನ್ನು ಸಂಗನಗೌಡ(50) ಎಂದು ಗರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಎಂಟು ಮಂದಿಯ ವಿರುದ್ಧ ನೇಸರಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜುನಾಥ ಬಳಗನ್ನವರ, ದೇಮಪ್ಪ ಬಳಗನ್ನವರ, ರುದ್ರಪ್ಪ, ರುದ್ರಪ್ಪ, ವಿಜಯ್, ಸೂರಪ್ಪ, ಸಿದ್ದಪ್ಪ, ನಾಗರಾಜ,‌ ಬಸವಂತಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಮನೆ ಮುಂದೆ ಕುಣಿದಿದ್ದಕ್ಕೆ ಕೊಲೆ?

ಮೃತ ಸಂಗನಗೌಡ ಹಾಗೂ ಆರೋಪಿ ಕುಟುಂಬದ ಮಧ್ಯೆ ಹಳೆಯ ವೈಷಮ್ಯ ಇತ್ತು ಎನ್ನಲಾಗಿದೆ. ಸಿದ್ದೇಶ್ವರ ಜಾತ್ರೆಯಲ್ಲಿ ತನ್ನ ವಿರೋಧಿಗಳ ಮನೆ ಮುಂದೆ ಸಂಗನಗೌಡ ಪಾಟೀಲ್​​​ ಕುಣಿದಾಡಿದ್ದಾರೆ. ಮನೆ ಮುಂದೆ ಕುಣಿಬೇಡ ಆಕಡೆ ಹೋಗು ಎಂದು ಆರೋಪಿಗಳು ಹೇಳಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ಮಾರಾಮಾರಿ ನಡೆದಿದೆ. ಕೊಡಲಿ, ಕಬ್ಬಿಣದ ರಾಡ್​, ಕುಡುಗೋಲು ಹಿಡಿದು ಬಂದ ಆರೋಪಿಗಳು ಅವರನ್ನು ಕೊಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ರಕ್ತದ ಮಡುವಲ್ಲಿ ಬಿದ್ದ ಸಂಗನಗೌಡರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಹೇಳಲಾಗಿದೆ.

ಕಲಬುರಗಿಯಲ್ಲಿ ಶಿಕ್ಷಕಿ ಕೊಲೆ

ಕಲಬುರಗಿ ತಾಲೂಕಿ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಜ್ಯೋತಿ ಕಪಾಳ ಎಂಬುವವರ ಶವ ಶನಿವಾರ ಪತ್ತೆಯಾಗಿತ್ತು. ಈ ಕೇಸ್​ಗೆ ಟ್ವಿಸ್ಟ್​ವೊಂದು ಸಿಕ್ಕಿದೆ. ಅಮರ್​ ಕುಡ್ದಳ್ಳಿ ಬಂದಿತ ಆರೋಪಿ ಈತನಿಗೆ ಟೀಚರ್​ ಕಷ್ಟ ಕಾಲದಲ್ಲಿ ಹಣ ಕೊಟ್ಟಿದ್ದರು. ಮೊದಲು ಸ್ನೇಹಿತರಾಗಿದ್ದ ಕಾರಣ ಅವರಿಂದ 14 ಲಕ್ಷ ಹಣ ಪಡೆದು ನಂದಿನಿ ಪಾರ್ಲರ್​ ತೆರೆದಿದ್ದ. ಕೆಲ ದಿನದ ಹಿಂದೆ ಅದನ್ನು ವಾಪಸ್ ಕೇಳಿದ್ದರು. ಹೀಗಾಗಿ ಹಣ ಕೊಡುತ್ತೇನೆ ಎಂದು ಅವರನ್ನು ಕರೆಸಿಕೊಂಡು ಕಾರಿನಲ್ಲಿ ಸುತ್ತಾಡಿಸಿ, ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ನಂತರ, ಸಾಕ್ಷಿ ನಾಶ ಪಡಿಸುವ ಸಲುವಾಗಿ, ಪೆಟ್ರೋಲ್​ ಸುರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net