ಎಲ್ಲರೂ ಸಹೋದರರಂತೆ ನಡೆದುಕೊಳ್ಳಿ

ಸುರಪುರ ತಾಲೂಕಿನ ಶಖಾಪುರ ಎಸ್‌ಎಚ್ ಗ್ರಾಮಕ್ಕೆ ಗುರುವಾರ ಮಾಜಿ ಸಚಿವ ರಾಜುಗೌಡ ಭೇಟಿ ನೀಡಿ ಹ¯್ಲೆಗೊಳಗಾದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೇಲಪ್ಪ ಗುಳಗಿ, ರಾಜಾ ಮುಕುಂದ ನಾಯಕ, ವೇಣುಗೋಪಾಲ ನಾಯಕ ಜೇವರ್ಗಿ, ದೇವರಾಜ ಮಕಾಶಿ, ಸೋಮನಾಥ ಡೊಣ್ಣಿಗೇರಾ ಇತರರಿದ್ದರು.
ಸುರಪುರ ತಾಲೂಕಿನ ಶಖಾಪುರ ಎಸ್‌ಎಚ್ ಗ್ರಾಮಕ್ಕೆ ಗುರುವಾರ ಮಾಜಿ ಸಚಿವ ರಾಜುಗೌಡ ಭೇಟಿ ನೀಡಿ ಹ¯್ಲೆಗೊಳಗಾದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೇಲಪ್ಪ ಗುಳಗಿ, ರಾಜಾ ಮುಕುಂದ ನಾಯಕ, ವೇಣುಗೋಪಾಲ ನಾಯಕ ಜೇವರ್ಗಿ, ದೇವರಾಜ ಮಕಾಶಿ, ಸೋಮನಾಥ ಡೊಣ್ಣಿಗೇರಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಚಿ ಸಚಿವ ರಾಜೂಗೌಡ ಸಲಹೆ
  • ಶಖಾಪುರ ಎಸ್‌ಎಚ್ ಗ್ರಾಮಕ್ಕೆ ಭೇಟಿ
ಸುರಪುರ :

ದಲಿತ ಕುಟುಂಬದವರ ಮೇಲೆ ಹ¯್ಲÉ ನಡೆದಿರುವ ತಾಲೂಕಿನ ಶಖಾಪುರ ಎಸ್‌ಎಚ್ ಗ್ರಾಮಕ್ಕೆ ಗುರುವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಭೇಟಿ ನೀಡಿ ಹ¯್ಲÉಗೊಳಗಾದ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಶವ ಸಂಸ್ಕಾರಕ್ಕೆ ಗುಂಡಿ ತೋಡಲು ನಿರಾಕರಿಸಿದ್ದ ವಿಷಯಕ್ಕೆ ಸಂಬAಽಸಿದAತೆ ದಲಿತ ಸಮುದಾಯದ ದೇವಪ್ಪ ತಳವಾರ ಹಾಗೂ ಅವರ ಕುಟುಂಬದವರ ಮೇಲೆ ಹ¯್ಲÉ ನಡೆದಿತ್ತು. ಘಟನೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ದೇವಪ್ಪ ತಳವಾರ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಕ್ರಮಕ್ಕೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ನಂತರ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮುಖಂಡರನ್ನು ಸಹ ಭೇಟಿ ಮಾಡಿದರು. ಗ್ರಾಮದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ ಬಾಳ್ವೆ ನಡೆಸಬೇಕು. ಪರಸ್ಪರ ಗೌರವ, ಸಂಯಮ ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಗ್ರಾಮದಲ್ಲಿ ಶಾಂತಿ-ಸಾಮರಸ್ಯ ಕಾಪಾಡುವುದು ಎಲ್ಲರ ಜವಬ್ದಾರಿಯಾಗಿದೆ ಎಂದು ಮನವಿ ಮಾಡಿದರು.
ಈ ವೇಳೆ ಮೇಲಪ್ಪ ಗುಳಗಿ, ರಾಜಾ ಮುಕುಂದ ನಾಯಕ, ವೇಣುಗೋಪಾಲ ನಾಯಕ ಜೇವರ್ಗಿ, ದೇವರಾಜ ಮಕಾಶಿ, ಸೋಮನಾಥ ಡೊಣ್ಣಿಗೇರಾ, ಬಲಭೀಮ ನಾಯಕ ಭೈರಿಮರಡ್ಡಿ, ಶಂಕರ ನಾಯಕ, ರಾಜÁ ರಂಗಪ್ಪ ನಾಯಕ, ಶರಣು ನಾಯಕ ಭೈರಿಮರಡ್ಡಿ, ಭೀಮಾಶಂಕರ ಬಿಲ್ಲವ್, ವೆಂಕಟೇಶ ನಾಯಕ ಬೈರಿಮರಡ್ಡಿ, ವಿಷ್ಣು ಗುತ್ತೇದಾರ್, ಪ್ರವೀಣ ನಾಯಕ ಡೊಣ್ಣಿಗೇರಾ, ಜೈರಾಮ ನಾಯಕ, ಈಶ್ವರ ನಾಯಕ, ರಮೇಶಗೌಡ, ಶರಣು ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net