ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ

ಕಾಳಗಿ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗಳ ಸಭೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಮಾತನಾಡಿದರು. ಪೃಥ್ವಿರಾಜ ಪಾಟೀಲ್​, ಬಸಲಿಂಗಪ್ಪ ಡಿಗ್ಗಿ, ಪಂಕಜಾ ಎ. ಇದ್ದರು.
ಕಾಳಗಿ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗಳ ಸಭೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಮಾತನಾಡಿದರು. ಪೃಥ್ವಿರಾಜ ಪಾಟೀಲ್​, ಬಸಲಿಂಗಪ್ಪ ಡಿಗ್ಗಿ, ಪಂಕಜಾ ಎ. ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಅವಿನಾಶ ಜಾಧವ್​ ತಾಕೀತು
  • ಕಾಳಗಿಯಲ್ಲಿ ಕುಡಿವ ನೀರಿನ ಸಭೆ
 ಕಾಳಗಿ: ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜಲಮೂಲಗಳು ಬರಿದಾಗುತ್ತಿವೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ.ಅವಿನಾಶ ಜಾಧವ್​ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೋರ್​ವೆಲ್​ಗಳ ಸಮರ್ಪಕ ನಿರ್ವಹಣೆ ಮಾಡಬೇಕು, ಹೆಚ್ಚಿನ ಸಮಸ್ಯೆ ಇದ್ದಲ್ಲಿ ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡಬೇಕು. ಪ್ರತಿ ಗ್ರಾಮಕ್ಕೂ ಭೇಟಿ ಮಾಡಿ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಪಡೆಯಬೇಕು. ತುರ್ತು ಅಗತ್ಯವಿರುವ ಕಡೆ ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜೆಸ್ಕಾಂ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಿದರೆ ಸಮಸ್ಯೆ ಶ್ರೀದಲ್ಲೆ ನಿವಾರಿಸಬಹುದು ಎಂದು ಹೇಳಿದರು.
ತಹಸೀಲ್ದಾರ್​ ಪೃಥ್ವಿರಾಜ ಪಾಟೀಲ್​, ತಾಪಂ ಇಒ ಬಸಲಿಂಗಪ್ಪ ಡಿಗ್ಗಿ, ಪಪಂ ಮುಖ್ಯಾಧಿಕಾರಿ ಪಂಕಜಾ ಎ., ಪಶು ವೈದ್ಯಾಧಿಕಾರಿ ಗೌತಮ ಕಾಂಬ್ಳೆ, ಜೆಸ್ಕಾಂ ಎಇಇ ಇಲಿಯಾಸ್​ ಅಹ್ಮದ್​, ಪಪಂ ಸದಸ್ಯರಾದ ರಮೇಶ ಕಿಟ್ಟದ, ಜಿತೇಂದ್ರ ರಾಠೋಡ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net