ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

ಗುರುಮಠಕಲ್​ನಲ್ಲಿ ಶುಕ್ರವಾರ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಕುಡಿಯುವ ನೀರಿನ ಕುರಿತು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ಇಒ ಅಮರೇಶ ಪಾಟೀಲ್​ ಇತರರಿದ್ದರು.
ಗುರುಮಠಕಲ್​ನಲ್ಲಿ ಶುಕ್ರವಾರ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಕುಡಿಯುವ ನೀರಿನ ಕುರಿತು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ಇಒ ಅಮರೇಶ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಕಂದಕೂರ ಸೂಚನೆ
  • ಗುರುಮಠಕಲ್​ನಲ್ಲಿ ಟಾಸ್ಕ್​ಫೋರ್ಸ್​ ಸಭೆ
ಗುರುಮಠಕಲ್​: ಮುಂಬರುವ ಬೇಸಿಗೆಯ ಎರಡು ತಿಂಗಳ ಕಾಲ ಗ್ರಾಮೀಣ ಭಾಗದ ಜನತೆಗೆ ಯಾವುದೇ ರೀತಿಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಅಧಿಕಾರಿಗಳ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕುಡಿಯುವ ನೀರಿನ ನಿರ್ವಹಣೆಗೆ ಸರ್ಕಾರದಿಂದ ಇದುವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಕಳೆದ ಸಾಲಿನಲ್ಲಿ ೇತ್ರದಲ್ಲಿ ಕೊಳವೆಬಾವಿ ಕೊರೆಸಿದ್ದ ಸುಮಾರ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಬಿಲ್​ಬಾಕಿ ಇರುವ ಬಗ್ಗೆ ನಾನು ಕಳೆದ ಬಾರಿ ಸದನದಲ್ಲಿ ಸರ್ಕಾರ ಗಮನ ಸೆಳೆದಿದ್ದೇನೆ. ಹೀಗಾಗಿ ಬಾಕಿ ಇರುವ ಅನುದಾನ ಬಿಡುಗಡೆ ಸೇರಿ ಸಧ್ಯ ಅಗತ್ಯವಾಗಿರುವ ಅನುದಾನದ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ ಸೂಚಿಸಿದೆ ಎಂದರು.
ಅಧಿಕಾರಿಗಳು ಸೋಮವಾರದ ಒಳಗಾಗಿ ಈ ಎರಡೂ ತಾಲೂಕುಗಳಲ್ಲಿ ಹೊಸ ಕೊಳವೆಬಾವಿ ಕೊರೆಯಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಬೇಸಿಗೆ ಹಿನ್ನೆಲೆಯಲ್ಲಿ ಸರ್ಕಾರ ಹಸಿ ಅಥವಾ ಒಣ ಬರಗಾಲ ಎಂದು ೂಷಣೆ ಮಾಡಿಲ್ಲ. ಅಲ್ಲದೆ ಟಾಸ್ಕ್​ ಫೋರ್ಸ್​ಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಆದರೆ, ಸಧ್ಯ ಆರ್​ಒ ಪ್ಲಾಂಟ್​ ರಿಪೇರಿ ಸೇರಿ ನಿರ್ವಹಣೆಗೆಗಾಗಿ ಗುರಮಠಕಲ್​ ಮತೇತ್ರಕ್ಕೆ ಸಂಬಂಧಿಸಿದಂತೆ 35.50 ಲಕ್ಷ ಅನುದಾನ ಗ್ರಾಮೀಣ ನೀರು ಸರಬರಾಜು ವಿಭಾಗಕ್ಕೆ ಬಿಡುಗಡೆಯಾಗಿದೆ. 28 ಗ್ರಾಮಗಳಲ್ಲಿನ ಶದ್ಧ ಕುಡಿಯುವ ನೀರಿನ ಟಕಗಳನ್ನು ಒಂದುವರೆ ಲಕ್ಷದೊಳಗೆ ದುರಸ್ತಿ ಮಾಡಿಸುವಂತೆ ಸೂಚನೆ ನೀಡಿದರು.
ಕಳೆದೆರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಹಾನಿಗೊಳಗಾದ ಜೋಳ, ಭತ್ತ ಹಾಗೂ ಕಲ್ಲಂಗಡಿ ಬೆಳೆಗಳ ನಷ್ಟದ ಬಗ್ಗೆ ವರದಿ ಸಲ್ಲಿಸಬೇಕು. ಅಲ್ಲದೆ ಗ್ರಾಮೀಣ ಭಾಗದಲ್ಲಿ ವಿದ್ಯುತ್​ ಸಮಸ್ಯೆ ಇದ್ದರೆ ಅದರ ಬಗ್ಗೆಯೂ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಶಾಸಕರು, ಪಟ್ಟಣದ ಲ್ಮ ನಗರ, ಗಡ್ಡಿ ಮೊಹೊಲ್ಲಾ ಹಾಗೂ ಮರಾಠಾ ವಾಡ ಕಾಲನಿಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ಇಒ ಅಮರೇಶ ಪಾಟೀಲ್​, ಮಹಾದೇವಪ್ಪ, ಜೆಸ್ಕಾಂ ಅಧಿಕಾರಿಗಳಾದ ಅಮರೇಶ ರಾಠೋಡ್​ ಮಾರ್ಕಂಡೇಶ, ಕೃಷಿ ಇಲಾಖೆ ಅಧಿಕಾರಿ ಸುರೇಶ ಇದ್ದರು. ಅಲ್ಲದೆ ಸಮಸ್ಯಾತ್ಮಕ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಸೂಚನೆ ನೀಡಿದರು.
"

ಮತೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರಿಸುವ ಬಗ್ಗೆ ತಹಸೀಲ್ದಾರರು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಇನ್ನೆರಡು ದಿನಗಳಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು. 

> ಶರಣಗೌಡ ಕಂದಕೂರ 

ಶಾಸಕ ಗುರುಮಠಕಲ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net