ಎಚ್ಚರ... ಹೆಚ್ಚುತ್ತಿದೆ ಮಿದುಳು ಕಾಯಿಲೆ brain disease

ಎಚ್ಚರ... ಹೆಚ್ಚುತ್ತಿದೆ ಮಿದುಳು ಕಾಯಿಲೆ brain disease
ಎಚ್ಚರ... ಹೆಚ್ಚುತ್ತಿದೆ ಮಿದುಳು ಕಾಯಿಲೆ brain disease
Published on

ಪ್ರಮುಖ ಮುಖ್ಯಾಂಶಗಳು

  • ಮುಂಜಾಗ್ರತೆ ವಹಿಸಲು ಮಣಿಪಾಲ್​ ಆಸ್ಪತ್ರೆ ನ್ಯೂರೋ ತಜ್ಞ ಡಾ.ಸಾತ್ವಿಕ್​ ಆರ್​.ಶೆಟ್ಟಿ ಸಲಹೆ
ಕೋಲಾರ: ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ಹರಡದಂತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಮಣಿಪಾಲ್​ ಆಸ್ಪತ್ರೆ ನ್ಯೂರೋ ತಜ್ಞ ಡಾ.ಸಾತ್ವಿಕ್​ ಆರ್​.ಶೆಟ್ಟಿ ತಿಳಿಸಿದರು. brain disease
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರಮಂಡಲ ಸಮಸ್ಯೆ ಅಂಗವೈಕಲ್ಯ ಮತ್ತು ಮರಣಕ್ಕೂ ಕಾರಣವಾಗುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.3.3 ಜನ ಮಿದುಳು, ನರಮಂಡಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದರು.
ದಣ ಕರ್ನಾಟಕದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅತ್ಯಾಧುನಿಕ ವೈದ್ಯಕಿಯ ತಂತ್ರಜ್ಞಾನದ ಮೂಲಕ ಸಮಗ್ರ ಆರೈಕೆಗೆ ಒಳಗಾದರೆ ಜೀವನದ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಪಾರ್ಕಿನ್ಸನ್​ ಕಾಯಿಲೆಯು ಚಲನೆಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ನರಮಂಡಲವನ್ನು ಅವನತಿಯೆಡೆಗೆ ಕೊಂಡೊಯ್ಯುವ ಕಾಯಿಲೆಯಾಗಿದೆ. ಡಿಬಿಎಸ್​ ಚಿಕಿತ್ಸಾ ವಿಧಾನವು ಪಾರ್ಕಿನ್ಸ್​ನ್​ ಕಾಯಿಲೆಯಲ್ಲಿ ಉಂಟಾಗುವ ಬಿಗಿತ, ನಡುಕ ಮತ್ತು ನಿಧಾನಗತಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ನ್ಯೂರೋಮಸ್ಕುಲರ್​ ತಜ್ಞೆ ಡಾ.ವೀಣಾ ವೇದಾರ್ಥಂ ಮಾತನಾಡಿ, ಪಾರ್ಶ್ವವಾಯು ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಕಾಲಮಿತಿಯೊಳಗೆ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆ ಗುಣಪಡಿಸಿಕೊಳ್ಳಬಹುದು ಎಂದು ಹೇಳಿದರು.
ರಕ್ತ ಹೆಪ್ಪುಗಟ್ಟುವಿಕೆ, ರಕ್ತಸ್ರಾವದಿಂದ ಪಾರ್ಶ್ವವಾಯು ಹರಡುತ್ತದೆ. ಪಾರ್ಶ್ವವಾಯು ಬಂದ ತಕ್ಷಣ ಮಿದುಳಿನ ಜೀವಕೋಶಗಳನ್ನು ಹಾನಿಗೊಳಿಸುತ್ತವೆ. ರೋಗಿಯು 4 ಗಂಟೆಗಳ ಒಳಗೆ ಬಂದರೆ, ಔಷಧ ನೀಡಿ ರಕ್ತದ ಹೆಪ್ಪುಗಟ್ಟುವಿಕೆ ತಪ್ಪಿಸಬಹುದು. ರ್ನಿದಿಷ್ಟ ಪ್ರಕರಣಗಳಲ್ಲಿ, ಹೆಪ್ಪುಗಟ್ಟುವಿಕೆ ಇಲ್ಲದಂತೆ ಮಾಡಲು 24 ಗಂಟೆಗಳವರೆಗೆ ಪರಿಣಿತ ಸಾಧನಗಳನ್ನು ಬಳಸಲು ಸಾಧ್ಯ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net