ಬಿ.ಬಿ.ಶಿವಪ್ಪ ಅವರದ್ದು ಅಪರೂಪದ ವ್ಯಕ್ತಿತ್ವ

 ನಗರದಲ್ಲಿ ಆಯೋಜಿಸಿದ್ದ ಮಾಜಿ ಶಾಸಕ ಬಿ.ಬಿ ಶಿವಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
ನಗರದಲ್ಲಿ ಆಯೋಜಿಸಿದ್ದ ಮಾಜಿ ಶಾಸಕ ಬಿ.ಬಿ ಶಿವಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿಮೆಂಟ್ ಮಂಜು
  • ಯಸಳೂರು ಗ್ರಾಮದ ನಂದೀಶ್ವರ ಕಲ್ಯಾಣ ಮಂಟಪ

ಸಕಲೇಶಪುರ:

ಆಸ್ತಿ ಮಾರಿ ಬಿಜೆಪಿ ಕಟ್ಟಿದವರು ಬಿ.ಬಿ.ಶಿವಪ್ಪ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಯಸಳೂರು ಗ್ರಾಮದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಿ.ಬಿ.ಶಿವಪ್ಪ ಅವರ 9ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಗಾಗಿ ಜೀವನವನ್ನೇ ಶಿವಪ್ಪ ಮುಡಿಪಾಗಿಟ್ಟಿದ್ದರು. ಪಕ್ಷ ಸಂಘಟನೆಗಾಗಿ ಆಸ್ತಿಯನ್ನೇ ಮಾರಾಟ ಮಾಡಿ ರಾಜಕಾರಣ ಮಾಡಿದ ಅಪರೂಪದ ವ್ಯಕ್ತಿತ್ವ ಇವರದ್ದು ಎಂದು ಸ್ಮರಿಸಿದರು.
ಕ್ಷೇತ್ರವನ್ನು ಎರಡು ಬಾರಿ ಶಾಸಕರಾಗಿ ಪ್ರತಿನಿಧಿಸುವ ಮೂಲಕ ವಿಧಾನ ಸಭೆಗೆ ಶೋಭೆ ತಂದಿದ್ದರು. ಅಜಾತಶತ್ರು ಎಂದು ಗುರುತಿಸಿಕೊಂಡ ಇವರನ್ನು ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರು ಗೌರವಿಸುತ್ತಾರೆ. ಪಕ್ಷದ ಹಿರಿಯ ನಾಯಕರು ನೇರ ಪರಿಚಯವಿದ್ದರೂ ರಾಜಕೀಯವಾಗಿ ಸ್ವಾರ್ಥಕ್ಕೆ ಸಂಪರ್ಕವನ್ನು ಎಂದಿಗೂ ಬಳಸಿಕೊಳ್ಳಲಿಲ್ಲ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಕಾರ್ಯಧರ್ಶಿ ಮೋಹನ್, ಮುಖಂಡರಾದ ಬ್ಯಾಕರವಳ್ಳಿ ಜಯಣ್ಣ, ಜೈಮಾರುತಿ ದೇವರಾಜ್, ಜಯಪ್ರಕಾಶ್, ಉದಯಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net