ಮೆರವಣಿಗೆ: ಓಕುಳಿಯ ಬಳಿಕ ಕೀಲುಕುಣಿತ, ವೀರಗಾಸೆ, ಗಾರುಡಿ ಗೊಂಬೆ, ದೇವರ ಕುಣಿತ, ಮರಗಾಲು ಕುಣಿತ, ಮಂಗಳವಾದ್ಯ, ತಮಟೆ, ನಗಾರಿ, ಮಂಗಳಮುಖಿಯರ ನೃತ್ಯ, ಅರೇಹಳ್ಳಿ ಯುವಕರ ವೀರಗಾಸೆ ತಂಡ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಮನಸೋರೆಗೊಂಡವು. ವಿವಿಧ ವೇಷಭೂಷಣ ತೊಟ್ಟು ವಚನಗಳನ್ನು ಹಾಡಿನ ಮೂಲಕ ಹೇಳುತ್ತಾ ವಿವಿಧ ಕಲಾವಿದರು ನೃತ್ಯ ಮಾಡಿದರು.