ಬಸವಣ್ಣನವರ ಬೃಹತ್​ ಉತ್ಸವ ಮೂರ್ತಿ ಮೆರವಣಿಗೆ / NELAMANGAL

ನೆಲಮಂಗಲದಲ್ಲಿ ಇಷ್ಟಲಿಂಗ ಪೂಜಾ ಬಸವೇಶ್ವರ ಉತ್ಸವಮೂರ್ತಿ ಮೆರವಣಿಗೆಯಲ್ಲಿ ಪವಾಡ ಶ್ರೀಬಸವಣ್ಣದೇವರಮಠದ ಶ್ರೀಸಿದ್ದಲಿಂಗಸ್ವಾಮೀಜಿ, ಬೆಂಗಳೂರು ಗುರುವಣ್ಣದೇವರಮಠ, ನಿಜಗುಣಮಠ, ಕುಣಿಗಲ್​ ಬೆಟ್ಟಹಳ್ಳಿಮಠ, ಕಂಚ್​ಗಲ್​ ಬಂಡೇಮಠ, ಚಕ್ರಬಾವಿ ಮಠ ಶ್ರೀಗಳು ಪಾಲ್ಗೊಂಡಿದ್ದರು.
ನೆಲಮಂಗಲದಲ್ಲಿ ಇಷ್ಟಲಿಂಗ ಪೂಜಾ ಬಸವೇಶ್ವರ ಉತ್ಸವಮೂರ್ತಿ ಮೆರವಣಿಗೆಯಲ್ಲಿ ಪವಾಡ ಶ್ರೀಬಸವಣ್ಣದೇವರಮಠದ ಶ್ರೀಸಿದ್ದಲಿಂಗಸ್ವಾಮೀಜಿ, ಬೆಂಗಳೂರು ಗುರುವಣ್ಣದೇವರಮಠ, ನಿಜಗುಣಮಠ, ಕುಣಿಗಲ್​ ಬೆಟ್ಟಹಳ್ಳಿಮಠ, ಕಂಚ್​ಗಲ್​ ಬಂಡೇಮಠ, ಚಕ್ರಬಾವಿ ಮಠ ಶ್ರೀಗಳು ಪಾಲ್ಗೊಂಡಿದ್ದರು.
Published on
ನೆಲಮಂಗಲ : ಬಸವ ಜಯಂತಿ ಉತ್ಸವ ಪ್ರಯುಕ್ತ ನಗರದ ಮುಖ್ಯರಸ್ತೆಯಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತಿರುವ ಬಸವಣ್ಣನವರ ಬೃಹತ್​ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ನಗರದ ಬಸವಣ್ಣ ದೇವರ ಮಠದಲ್ಲಿ ಸೋಮವಾರ ಸಂಜೆ ಆರಂಭಗೊಂಡ ಮೆರವಣಿಗೆಗೆ ನಾಡಿನ ವಿವಿಧ ಮಠಾಧೀಶರು ಚಾಲನೆ ನೀಡಿದರು.
ಮಠದ ಆವರಣದಲ್ಲಿ ಆರಂಭಗೊಂಡ ಮೆರವಣಿಗೆ ಸೊಂಡೆಕೊಪ್ಪ ವೃತ್ತ ಬೆಂಗಳೂರು&ತುಮಕೂರು ರಾಷ್ಟೀಯಹೆದ್ದಾರಿ&48ರ ಮೂಲಕ ಸುಭಾಷ್​ ನಗರ, ನಗರದ ಮುಖ್ಯ ರಸ್ತೆಯಲ್ಲಿ ಸಾಗಿತು.
ಶರಣೆ ಅಕ್ಕಮಹಾದೇವಿ, ಅಲ್ಲಮಪ್ರಭು, ಸತ್ಯಕ್ಕ ಮೂರ್ತಿಗಳ ಮೆರವಣಿಗೆಯೂ ನಡೆಯಿತು. ವೀರಗಾಸೆ, ಪೂಜಾಕುಣಿತ, ಡೊಳ್ಳುಕುಣಿತ ಸೇರಿ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ರೈತರು ಎತ್ತುಗಳನ್ನು ಅಲಂಕಾರ ಮಾಡಿಕೊಂಡು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರು, ಯುವಕರು, ಯುವತಿಯರು, ಮಹಿಳೆಯರು ತಮಟೆ ಸದ್ದಿಗೆ ರಸ್ತೆಯುದ್ದಕ್ಕೂ ಕುಣಿದು ಕುಪ್ಪಣಿಸಿದರು.
ಪವಾಡ ಶ್ರೀಬಸವಣ್ಣದೇವರಮಠದ ಶ್ರೀಸಿದ್ದಲಿಂಗಸ್ವಾಮೀಜಿ ನೇತೃತ್ವವಹಿಸಿದ್ದರು. ಅಖಿಲಭಾರತ ವೀರಶೈವಲಿಂಗಾಯಿತ ಮಹಾಸಭಾ ರಾಜ್ಯಮಹಿಳಾ ಕಾರ್ಯದರ್ಶಿ ರಾಜಮ್ಮ, ಜಿಲ್ಲಾಧ್ಯಕ್ಷ ರೇವಣಸಿದ್ಧಯ್ಯ, ತಾಲೂಕು ಅಧ್ಯಕ್ಷ ರಾಜಶೇಖರ್​, ಮಹಿಳಾಟಕದ ಅಧ್ಯೆ ವೇದಾವತಿ, ಕದಳಿವೇದಿಕೆ ಅಧ್ಯೆ ಮಂಜುಳಾಸುರೇಶ್​, ಸರ್ಕಾರಿ ನೌಕರರ ಸಂದ ಅಧ್ಯಕ್ಷ ಕೆ.ಎನ್​.ನಾಗೇಶ್​, ನಗರಸಭೆ ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದಿಪ್​, ನಿವೃತ್ತ ವೀರಶೈವ ಲಿಂಗಾಯತ ನೌಕರರ ಸಂದ ಅಧ್ಯಕ್ಷ ನಾಗರಾಜು, ಷಣ್ಮುಕಪ್ಪ, ೇಮಾಭಿವೃದ್ಧಿ ಸಂದ ಅಧ್ಯಕ್ಷ ಪರಮೇಶ್​.ಬಿ.ಅದರಂಗಿ, ಮುಖಂಡ ಯಾಡಾಳುಸತೀಶ್​, ಪೊಲೀಸ್​ ಜಗದೀಶ್​, ರೋಟರಿ ರವಿಕುಮಾರ್​, ಪುನೀತ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net