

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬಸವಣ್ಣನವರುಆಧ್ಯಾತ್ಮಿಕ,ಸಾಮಾಜಿಕ ಹಾಗೂಆರ್ಥಿಕ ಕ್ಷೇತ್ರಗಳಲ್ಲಿ ಮಹತ್ವದಪರಿವರ್ತನೆಗೆ ನಾಂದಿ ಹಾಡಿದ್ದರುಎಂದು ಸುತ್ತೂರು ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಹೇಳಿದರು. ಬಸವಸಮಿತಿಯಲ್ಲಿ ಹಮ್ಮಿಕೊಂಡಿದ್ದ62ನೇಸಂಸ್ಥಾಪನಾ ದಿನಾಚರಣೆ ಹಾಗೂಸಂಸ್ಥಾಪಕ ಬಿ.ಡಿ.ಜತ್ತಿಯವರ114ನೇಜಯಂತ್ಯುತ್ಸವ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.
ಬಸವಣ್ಣನವರುಕೇವಲ ಧಾರ್ಮಿಕ ವಿಚಾರಗಳಿಗೆಸೀಮಿತವಾಗಿರಲಿಲ್ಲ.ಸಮಾನತೆ,ಕಾಯಕ,ದಾಸೋಹ,ಸಾಮಾಜಿಕ ನ್ಯಾಯಹಾಗೂ ಮಾನವೀಯ ಮೌಲ್ಯಗಳನ್ನುಆಧರಿಸಿದ ಒಂದು ಹೊಸ ಸಮಾಜ ನಿರ್ಮಾಣದಕನಸನ್ನು ಕಂಡಿದ್ದರು.12ನೇ ಶತಮಾನದಲ್ಲಿಪ್ರತಿಪಾದಿಸಿದ್ದ ಆ ಮೌಲ್ಯಗಳುಇಂದಿಗೂ ಪ್ರಸ್ತುತವಾಗಿವೆ.
ಬಸವಸಮಿತಿ ಪ್ರಾರಂಭವಾಗಿ 62ವರ್ಷಗಳಾಗಿವೆ.ಸ್ಥಾಪಕರಾದಬಿ.ಡಿ.ಜತ್ತಿಯವರು,ಸುಸಂಸ್ಕೃತಕುಟುಂಬದಿಂದ ಬಂದವರು.ಅವರುಉಪರಾಷ್ಟ್ರಪತಿಯಾಗಿದ್ದರೂ,ತಮ್ಮ ಸರಳತೆಯನ್ನುಕಳೆದುಕೊಳ್ಳಲಿಲ್ಲ.ಶರಣ ತತ್ವವನ್ನುಸದಾ ಮೈಗೂಡಿಸಿಕೊಂಡು,ತ್ರಿಪುಂಡ್ರಧಾರಣೆಯೊಂದಿಗೆ ಬಸವತತ್ತ್ವದ ಪ್ರಚಾರಕ್ಕಾಗಿತಮ್ಮ ಇಡೀ ಬದುಕನ್ನೇ ಮೀಸಲಿಟ್ಟಿದ್ದರು.ಬೆಂಗಳೂರಿನಹೃದಯಭಾಗದಲ್ಲಿ ಬಸವ ಸಮಿತಿಯಕಾರ್ಯಾಲಯ ಕಾರ್ಯನಿರ್ವಹಿಸುತ್ತಿರುವುದರಹಿಂದೆ ಜತ್ತಿಯವರ ದೂರದೃಷ್ಟಿಮತ್ತು ಪರಿಶ್ರಮವಿದೆ.ಅವರ ಪುತ್ರಅರವಿಂದ ಜತ್ತಿಯವರು ಸಂಸ್ಥೆಯಕಾರ್ಯವನ್ನು ವಿಶ್ವವ್ಯಾಪಕಗೊಳಿಸಿದ್ದಾರೆಎಂದು ಸ್ವಾಮೀಜಿ ವಿವರಿಸಿದರು.
ಕಾರ್ಯಕ್ರಮದಲ್ಲಿಸದ್ಗುರು ಶ್ರೀ ಮಧುಸೂಧನ್ಸಾಯಿಯವರಿಗೆ ದಾಸೋಹ ರತ್ನಪ್ರಶಸ್ತಿಗೆ ನೀಡಿ ಗೌರವಿಸಲಾಯಿತು. ಅನ್ನ,ಅಕ್ಷರ ಮತ್ತುಆರೋಗ್ಯದ ಮೂಲಕ ಒಂದು ಜಗತ್ತು,ಒಂದು ಕುಟುಂಬಎಂಬ ಪರಿಕಲ್ಪನೆಯಲ್ಲಿ ಕಾರ್ಯಮತ್ತು ಸೇವೆ ಮಾಡುತ್ತಿರುವಸದ್ಗುರುಗಳ ಕೊಡುಗೆಯನ್ನು ಎಲ್ಲಗಣ್ಯರು ಮುಕ್ತ ಕಂಠದಿಂದ ಶ್ಲಾಸಿದರು.
ಕಾರ್ಯಕ್ರಮದಮೊದಲಿಗೆ ಶ್ರೀಸಾಯಿ ಆಧ್ಯಾತ್ಮಿಕವಿದ್ಯಾಲಯದ ವಿದ್ಯಾರ್ಥಿಗಳಿಂದಸುಶ್ರಾವ್ಯ ವಚನ ಗಾಯನ ನಡೆಯಿತು.ಸಮಾರಂಭದಲ್ಲಿಬೇಲಿ ಮಠದ ಶ್ರೀ ಶಿವರುದ್ರಸ್ವಾಮೀಜಿ, ಬಸವಸಮಿತಿ ಅಧ್ಯಕ್ಷ ಡಾ.ಅರವಿಂದಜತ್ತಿ, ಉಪಾಧ್ಯಕ್ಷಪ್ರಭುದೇವ ಚಿಗಟೇರಿ ಮತ್ತಿತರರುಉಪಸ್ಥಿತರಿದ್ದರು.