ಬಸವ ಜಯಂತಿ ಅಂಗವಾಗಿ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಮಹಿಳೆಯರ ಬೈಕ್ ರ‌್ಯಾಲಿಗೆ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷೆ ಮಹಾದೇವಿ ಗೋಕಾಕ ಮತ್ತು ಉಪಾಧ್ಯಕ್ಷೆ ಶಶಿಕಲಾ ಕೊಟಗಿ ಚಾಲನೆ ನೀಡಿದರು. ಬೈಕ್ ರ‌್ಯಾಲಿಯು ವಿವಿಧ ಪ್ರಮುಖ ವೃತ್ತಗಳಲ್ಲಿ ಕಂದಗಲ್ಲ ಹನುಮಂತರಾಯ ರಂಗಮಂದಿರ ತಲುಪಿತು. ಭಾರತಿ ನಾವಿ, ಪ್ರತಿಭಾ ಪಾಟೀಲ, ಶೀಲಾ ಬಿರಾದಾರ, ಶ್ವೇತಾ ಹರನಾಳ, ಭಾರತಿ ಪಾಟೀಲ, ಶಾರದ ಕೊಪ್ಪ, ಸಂಗೀತಾ ಪೂಜಾರಿ, ಸುಮಾ ಅಂಗಡಿ, ಶ್ರೀದೇವಿ ಪಾಟೀಲ, ಶ್ವೇತಾ ಅಕ್ಕಲಕೋಟ, ಅನುಸೂಯಾ ಬಿರಾದಾರ, ಶಿವಲೀಲಾ ಮನಗೊಂಡ, ಸುಮಾ ದುದಗಿ, ರಾಜೇಶ್ವರಿ ಮನಗೂಳಿ, ಅಕ್ಕಮ್ಮ ಮಠ, ನೀತಾ ಸೂಳಿಭಾವಿ ಮತ್ತಿತರರಿದ್ದರು.