ಈ ಹಿಂದೆ ಕೈಗಾರಿಕೆಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿಗೆ ಅಂದಾಜು 400 ಎಕರೆಗೂ ಅಧಿಕ ಅರಣ್ಯ ಜಮೀನು ನೀಡಲಾಗಿತ್ತು. ಆದರೆ, 160 ಎಕರೆ ಜಮೀನನ್ನು ಆ ಸಂಸ್ಥೆ ಮಾರಾಟ ಮಾಡಿಕೊಂಡಿದೆ. ಉಳಿದ 280 ಎಕರೆ ಜಮೀನನ್ನು ಮರಳಿ ಇಲಾಖೆಗೆ ಪಡೆಯಲಾಗುವುದು. ಇದಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ. ಜಾರಕ್‌ಬಂಡೆ ಪ್ರದೇಶದಲ್ಲಿ ಭಾರತೀಯ ವಾಯುಪಡೆಗೆ 444 ಎಕರೆ ಜಮೀನು ನೀಡಲಾಗಿತ್ತು. 1980ರ ಕಾಯ್ದೆ ಅನ್ವಯ ಯಾರಿಗೂ ಅರಣ್ಯ ಜಮೀನು ನೀಡಲು ಅವಕಾಶವಿಲ್ಲ. ಹೀಗಾಗಿ, 2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಭೂ ಮಂಜೂರಾತಿಯನ್ನು ರದ್ದು ಮಾಡಿದ್ದು, ಅದನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.