ಕಲ್ಯಾಣದಲ್ಲಿ ಬಸವ ಪಂಚಮಿ

ಬಸವಕಲ್ಯಾಣದ ಈಶ್ವರ ನಗರದಲ್ಲಿ ಅನುಭವ ಮಂಟಪ ಹಾಗೂ ರಾಷ್ಟ್ರೀಯ ಬಸವ ದಳ ಸಹಯೋಗದಲ್ಲಿ  ಸೋಮವಾರ ಆಯೋಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಶ್ರೀ ಶಿವಾನಂದ ಸ್ವಾಮೀಜಿ, ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ  ರವೀಂದ್ರ ಕೋಳಕುರ, ಸಿದ್ದಣ್ಣ ಭೂಮಾ, ಅಶೋಕ ಕುಂಬಾರ, ಚಂದ್ರಪ್ಪ ಗುಂಗೆ, ಶಂಕರ ಮದುರಗೈ, ಗಂಗಾಧರ, ರತೋಸ್​, ಶ್ರೀಶೈಲ ಬಿರಾದಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಿರಂತರ ಜನಜಾಗೃತಿ
ಬಸವಕಲ್ಯಾಣ:  ಹುತ್ತಕ್ಕೆ ಹಾಲು ಸುರಿಯುವ ಬದಲು ಹಸಿದ ಮಕ್ಕಳ ಹೊಟ್ಟೆ ತುಂಬಿಸುವುದೇ ಬಸವ ತತ್ವದ ನಿಜವಾದ ಆಚರಣೆ ಎಂದು ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕುರ ಹೇಳಿದರು.
ನಗರದ ಈಶ್ವರ ನಗರದಲ್ಲಿ ಶ್ರೀ ಮುಕ್ತನಾಥ ದೇವಸ್ಥಾನದ ಆವರಣದಲ್ಲಿ ಅನುಭವ ಮಂಟಪ ಹಾಗೂ ರಾಷ್ಟ್ರೀಯ ಬಸವದಳದ ಸಹಯೋಗದಲ್ಲಿ ಸೋಮವಾರ ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಿಯವರೆಗೆ ಜನರಲ್ಲಿ ಮೌಢ್ಯ ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ಜನಜಾಗೃತಿ ನಿರಂತರವಾಗಿ ಇರುತ್ತದೆ ಎಂದರು.
ದೇವರನ್ನು ಹುತ್ತದಲ್ಲಿ ಹುಡುಕುವ ಬದಲು ಹಸಿದ ಬಡ ಮಕ್ಕಳ ಮುಖದ ನಗುವಿನಲ್ಲಿ ಕಾಣೋಣ. ನಾಗಪಂಚಮಿಯಂದು ಹಾಲನ್ನು ವ್ಯರ್ಥ ಮಾಡದಿರೋಣ. ಹುತ್ತಕ್ಕೆ ಸುರಿಯುವ ಹಾಲು ನೆಲದ ಪಾಲಾಗುವ ಬದಲು, ಬಡ ಮಗುವಿನ ಹೊಟ್ಟೆ ಸೇರಿದರೆ ಅದೇ ದೇವರಿಗೆ ಸಲ್ಲುವ ನಿಜವಾದ ನೈವೇದ್ಯ ಎಂದು ತಿಳಿಸಿದರು.
 ಪೂಜ್ಯ ಶ್ರೀ ಶಿವಾನಂದ ದೇವರ ದಿವ್ಯ ನೇತೃತ್ವದಲ್ಲಿ ಸಮಾಜದ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ರತೋಸ್​, ಸಿದ್ದಣ್ಣ ಭೂಮಾ, ಅಶೋಕ ಕುಂಬಾರ, ಚಂದ್ರಪ್ಪ ಗುಂಗೆ, ಶಂಕರ ಮದುರಗೈ, ಗಂಗಾಧರ,  ಶ್ರೀಶೈಲ ಬಿರಾದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net