ಸೇಡಂನಲ್ಲಿ ಅದ್ದೂರಿ ಬಸವ ಜಯಂತಿ ನಾಳೆ

 ರಾಜಶೇಖರ ನೀಲಂಗಿ
ರಾಜಶೇಖರ ನೀಲಂಗಿ
Published on

ಪ್ರಮುಖ ಮುಖ್ಯಾಂಶಗಳು

  • ರಾಜಶೇಖರ ನೀಲಂಗಿ ಮಾಹಿತಿ
  • 2 ಸಾವಿರ ಜನರಿಂದ ಸಾಮೂಹಿಕ ಲಿಂಗಪೂಜೆ
ಸೇಡಂ: ಅಖಿಲ ಭಾರತ ವೀರಶೈವ&ಲಿಂಗಾಯತ ಮಹಾಸಭಾ ಹಾಗೂ ಬಸವ ಜಯಂತ್ಯುತ್ಸವ ಸಮಿತಿಯಿಂದ ಶನಿವಾರ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ&ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ ನೀಲಂಗಿ ಹೇಳಿದರು.
ಮಧ್ಯಾಹ್ನ 2ಕ್ಕೆ ಬಸವೇಶ್ವರ ವೃತ್ತದಿಂದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಬೈಕ್​ ಮತ್ತು ಕಾರು ರ್ಯಾಲಿ ನಡೆಯಲಿದೆ. ಸಂಜೆ 5.15ಕ್ಕೆ ಮಾತೃಛಾಯಾ ಕಾಲೇಜು ಆವರಣದಲ್ಲಿ 2 ಸಾವಿರಕ್ಕೂ ಅಧಿಕ ಶಿವಭಕ್ತರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಲಾಗಿದೆ. ಪೂಜೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸಮಿತಿಯಿಂದ ಕೇಸರಿ ಶಾಲು ಹಾಗೂ ಪೂಜಾ ಸಾಮಾಗ್ರಿ ನೀಡಲಾಗುತ್ತಿದೆ. ತೊಟ್ನಳ್ಳಿ ಮಹಾಂತೇಶ್ವರ ಮಠದ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು ಲಿಂಗಪೂಜೆಯ ವಿಧಾನ, ಮಹತ್ವ ತಿಳಿಸಿಕೊಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸಭೆಯಲ್ಲಿ ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸಿದ್ಧವಿರ ಶಿಚಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಕೊಟ್ಟುರೇಶ್ವರ ಶಿವಾಚಾರ್ಯ, ಶ್ರೀ ಅಭಿನವ ಗವಿಸಿದ್ಧಲಿಂಗೇಶ್ವರ ಶಿವಾಚಾರ್ಯ, ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶ್ರೀ ಮಲ್ಲಿಕಾರ್ಜುನ ದೇವರು, ಶ್ರೀ ಶಂಭುಲಿಂಗೇಶ್ವರ ಸ್ವಾಮೀಜಿ, ಶ್ರೀ ಚಿಕ್ಕಶಿವಲಿಂಗೇಶ್ವರ ದೇವರು, ಶ್ರೀ ಕೇದಾರಲಿಂಗ ದೇವರು ಸಾನ್ನಿಧ್ಯವಹಿಸುವರು. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ಡಾ.ಬಸವರಾಜ ಪಾಟೀಲ್​ ಸೇಡಂ, ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಸಿದ್ದಣ್ಣಗೌಡ ಶೆಟ್ಟಿ, ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್​ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಮಹಾಸಭಾ ಮಾಜಿ ಅಧ್ಯಕ್ಷ ಶರಣಬಸಪ್ಪ ಹಾಗರಗಿ, ಪ್ರಮುಖರಾದ ಅನೀಲ ಊಡಗಿ, ಬಸವರಾಜ ಕೋಸಗಿ, ಶಿವಾನಂದಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net