ಬಸವೇಶ್ವರ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

ಬಸವ ಜಯಂತಿ ಅದ್ಧೂರಿಯಾಗಿ ಆಚರಣೆ
ಬಸವ ಜಯಂತಿ ಅದ್ಧೂರಿಯಾಗಿ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಬಸವೇಶ್ವರ ಜಯಂತಿ ಆಚರಣೆ
  • ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
  • ಬೆಳಗಾವಿ ಲಿಂಗಾಯತ ಸಂಘಟನೆಯಿಂದ ಆಚರಣೆ
ಬಸವ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಬಸವ ತತ್ವ, ಶರಣ ಸಂಸ್ಕೃತಿ ಹಾಗೂ ಸಮಾಜಮುಖಿ ಸಂದೇಶಗಳನ್ನು ಜನಮನದಲ್ಲಿ ಬಿತ್ತುವ ಉದ್ದೇಶದಿಂದ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ರಮೇಶ ಕಳಸಣ್ಣವರ ತಿಳಿಸಿದರು.
ನಗರದ ರವಿವಾರ ಪೇಟೆಯಲ್ಲಿರುವ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಸಭಾಗೃಹದಲ್ಲಿ ಈಚೆಗೆ ಬಸವೇಶ್ವರ ಉತ್ಸವ ಸಮಿತಿ, ಲಿಂಗಾಯತ ಸಂಘಟನೆ,ಹಾಗೂ ಬಸವ ಭಕ್ತರು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವೇಶ್ವರರ ತತ್ವಗಳು,ಸಮಾನತೆ, ಸತ್ಯ, ಅಹಿಂಸೆ ಹಾಗೂ ಕಾಯಕವೇ ಕೈಲಾಸ ಇವುಗಳನ್ನು ಜನರಿಗೆ ತಲುಪಿಸುವ ಜಯಂತಿಯ ಪ್ರಮುಖ ಉದ್ದೇಶವಾಗಿದೆ. ಈ ನಿಮಿತ್ತ ಏ.19 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಬಸವೇಶ್ವರ ಸರ್ಕಲ್, ಗೋವಾವೇಸದಿಂದ ರಾಮತೀರ್ಥನಗರವರ್ಗೆ ಬೃಹತ್ ಬೈಕ್ ರ‍್ಯಾಲಿ ನಡೆಯಲಿದ್ದು,ಹಾಗೂ ಏ.26 ರಂದು ಸಾಯಂಕಾಲ 4.30 ಗಂಟೆಗೆ ನಗರದ ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್ ದಿಂದ ಬಸವಣ್ಣನವರ ಭವ್ಯ ಮೆರವಣಿಗೆ ಹಮ್ಮಿಕೊಂಡಿದ್ದು ,ನಗರದ ಎಲ್ಲಾ ಶರಣ ಶರಣೆಯರು, ಬಸವ ಭಕ್ತರು, ಯುವಕರು, ಮಹಿಳೆಯರು ಹಾಗೂ ಹಿರಿಯರು ಒಟ್ಟಾಗಿ ಭಾಗವಹಿಸುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಶ್ರಮಿಸಬೇಕೆಂದರು.
ಬಸವರಾಜ ರೊಟ್ಟಿ, ಪ್ರಕಾಶ ಬಾಳೇಕುಂದ್ರಿ, ರಮೇಶ ಸಿದ್ದಣ್ಣವರ, ಗಿರೀಶ ಬಾಗಿ, ಸತೀಶ ಪಾಟೀಲ, ಜಗದೀಶ ಖಡಬಡಿ, ಸರಳಾ ಹೇರೆಕರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net