ತತ್ವದ ಮೇಲೆ ಬಸವ ಧರ್ಮ ಸ್ಥಾಪನೆ

ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ ಹಾಗೂ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಲಿಂಗೈಕ್ಯ ಸಂಸ್ಮರಣೆ ಸಮಾರಂಭವನ್ನು ಪಾಂಡುಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಗುರುಮಹಾಂತ ಸ್ವಾಮೀಜಿ, ವಿರತೀಶಾನಂದ ಸ್ವಾಮೀಜಿ, ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ ಇದ್ದರು.
ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ ಹಾಗೂ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಲಿಂಗೈಕ್ಯ ಸಂಸ್ಮರಣೆ ಸಮಾರಂಭವನ್ನು ಪಾಂಡುಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಗುರುಮಹಾಂತ ಸ್ವಾಮೀಜಿ, ವಿರತೀಶಾನಂದ ಸ್ವಾಮೀಜಿ, ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಜಗುಣಾನಂದ ಸ್ವಾಮೀಜಿ ಅಭಿಮತ
  • ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ
ಕೂಡಲಸಂಗಮ: ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ನಂಬಿದ ತತ್ವಕ್ಕೆ ಮೋಸ ಮಾಡಲಿಲ್ಲ, ಯಾರೊಂದಿಗೆ ಹೊಂದಾಣಿಕೆಯಾಗಲಿಲ್ಲ, ಬದುಕಿನುದ್ದಕ್ಕೂ ನಂಬಿದ ತತ್ವದಂತೆ ಬದುಕಿದರೂ. ತತ್ವ, ಸಿದ್ದಾಂತದ ಮೇಲೆ ಬಸವ ಧರ್ಮ ಪೀಠ ಕಟ್ಟಿದ್ದಾರೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ ಹಾಗೂ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ನಾವು ಕೇವಲ ಅಭಿಮಾನಿಗಳು ಆಗುತ್ತಿದ್ದೇವೆ. ಅನುಭಾವಿಗಳು ಆಗುತ್ತಿಲ್ಲ. ಸಿಟ್ಟು ಒಂದು ಪುಟ, ಸಂಬಂಧ ದೊಡ್ಡ ಪುಸ್ತಕ. ಪುಟ ಹರಿದು ಸಂಬಂಧ ಕಳೆದುಕೊಳ್ಳುವುದು ಬೇಡ, ಪುಸ್ತಕ ಇಟ್ಟುಕೊಂಡು ಸಂಬಂಧ ಉಳಿಸಿಕೊಳ್ಳೋಣ. ನಾವು ನಕಾರಾತ್ಮಕ ಆಲೋಚನೆ ಬಿಟ್ಟು ಸಕಾರಾತ್ಮಕ ಆಲೋಚನೆ ಮಾಡಬೇಕು ಎಂದರು.
ಪಾಂಡುಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರಿಗೆ ದೂರ ದೃಷ್ಠಿ ಇತ್ತು. ರಾಜ್ಯದಲ್ಲಿ ದೊಡ್ಡ ದೊಡ್ಡ ಮಠಗಳು ಇದ್ದರು ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮ, ಕಾರ್ಯಕ್ಷೇತ್ರ ಬಸವ ಕಲ್ಯಾಣವನ್ನು ಯಾರು ಅಭಿವೃದ್ಧಿ ಮಾಡದ ಕಾಲಘಟದಲ್ಲಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಬಸವ ಧರ್ಮ ಪೀಠ ಸ್ಥಾಪಿಸಿ ಶರಣ ಮೇಳ, ಕಲ್ಯಾಣ ಪರ್ವದ ಮೂಲಕ ವಿಶ್ವಕ್ಕೆ ಬಸವಣ್ಣನ ಕ್ಷೇತ್ರಗಳನ್ನು ಪರಿಚಯಿಸಿ, ಅಭಿವೃದ್ಧಿಪಡಿಸಿದರು.
ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಬಸವ ತತ್ವ ಸಾಧಕರ ತಂಡಗಳನ್ನೇ ನಿರ್ಮಿಸಿದ್ದರು. ಇಂದು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಭಕ್ತರ, ಸಾಧಕರ ಪಡೆಯೇ ಇದೇ. ಕೆಲವರು ಸನ್ಯಾಸಿಗಳಾಗಿ, ಇನ್ನೂ ಕೆಲವರು ಗೃಹಸ್ಥರಾಗಿ ತತ್ವ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಮಠಾಧೀಶರ ಒಕ್ಕೂಟದ ಮೂಲಕ ಪ್ರಧಾನಿಗಳಿಗೆ ಲಿಂಗಾಯತ ಸ್ವತಂತ್ರ ಧರ್ಮ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಮನವಿ ಕೊಡುವ ಕಾರ್ಯ ಮಾಡಬೇಕು. ಭಕ್ತರು ತತ್ವ ನಿಷ್ಠೆ ಇಲ್ಲದ ಶ್ರೀಗಳಿಂದ ದೂರ ಇರಬೇಕು, ಹತ್ತಿರವು ಸೇರಿಸಿಕೊಳ್ಳಬಾರದು, ತಿರಸ್ಕರಿಸಬೇಕು ಎಂದು ತಿಳಿಸಿದರು.
ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಬಸವಾದಿಶರಣ ತತ್ವ ಪ್ರಸಾರಕ್ಕಾಗಿಯೇ ಹುಟ್ಟಿದ್ದೆ ಬಸವ ಧರ್ಮ ಪೀಠ, ತತ್ವ ಸಿದ್ದಾಂತದಂತೆ ಕಾರ್ಯ ನಿರ್ವಹಿಸುವುದು ಎಂದರು.
ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿ ಅಕ್ಕನಾಗಲಾಂಬಿಕಾ ಪೀಠದ ಮಾತೆ ದಾನೇಶ್ವರಿ, ಬಸವ ಕಲ್ಯಾಣದ ಸಿದ್ಧರಾಮೇಶ್ವರ ಸ್ವಾಮೀಜಿ, ಹೈದರಾಬಾದ ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ, ಮಾತೆ ಬಸವರತ್ನಾದೇವಿ, ಮಾತೆ ಅಕ್ಕನಾಗಲಾಂಬಿಕೆ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಕೆ.ವಿ.ವೀರೇಶ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಮುಂತಾದವರು ಇದ್ದರು.
ರಾಷ್ಟ್ರೀಯ ಬಸವದಳ ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಕೆ.ವಿ.ವೀರೇಶ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಘೋಷಿಸಿದರು.
"

ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಉದ್ಘಾಟನೆ, ನಿರ್ವಹಣೆ ಬಸವ ತತ್ವ ಅನುಯಾಯಿಗಳು, ಪೂಜ್ಯರ ನೇತತ್ವದಲ್ಲಿ ನಡೆಯಬೇಕು.

ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದ ಕೂಡಲಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಸ್ಥಗಿತಗೊಂಡಿದ್ದು, ಕಾಮಗಾರಿ ಆರಂಭಿಸಿ ಮುಂದಿನ ವರ್ಷ ಸರ್ಕಾರ ಉದ್ಘಾಟನೆ ಮಾಡಬೇಕು.

ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಆಶ್ರಮದಲ್ಲಿ ನಿರ್ಮಾಣವಾಗುತ್ತಿರುವ 112 ಅಡಿ ಬಸವ ಪುತ್ಥಳಿ ನಿರ್ಮಾಣ ಕಾರ್ಯ ಮುಕ್ತಾಯ ಮಾಡಲು ಬಸವ ಭಕ್ತರು ಸಂಕಲ್ಪಮಾಡಬೇಕು.

ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು, ಬಸವಾನುಯಾಯಿಗಳು ಚುಣಾವಣೆಯಲ್ಲಿ ಆಮಿಷಕ್ಕೆ ಒಳಗಾಗದೇ, ವಿವೇಕಯುತವಾಗಿ ಮತ ಚಲಾಯಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net