ಅರೇಹಳ್ಳಿ ಸಂಚಾರ ಠಾಣೆಗೆ ಬ್ಯಾರಿಕೇಡ್ ಹಸ್ತಾಂತರ

 ಅರೇಹಳ್ಳಿ ಪೊಲೀಸ್ ಠಾಣೆಗೆ ಎಸ್.ಎಸ್.ಸ್ಟೀಲ್ ಸಂಸ್ಥೆಯಿಂದ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.
ಅರೇಹಳ್ಳಿ ಪೊಲೀಸ್ ಠಾಣೆಗೆ ಎಸ್.ಎಸ್.ಸ್ಟೀಲ್ ಸಂಸ್ಥೆಯಿಂದ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್.ಎಸ್ ಸ್ಟೀಲ್ ಸಂಸ್ಥೆ
  • ಅರೇಹಳ್ಳಿ ಸಂಚಾರ ಠಾಣೆ
ಬೇಲೂರು: ಸಾಮಾಜಿಕ ಹೊಣೆಗಾರಿಕೆ ಹಿತದೃಷ್ಟಿಯಿಂದ ಸಕಲೇಶಪುರದ ಎಸ್.ಎಸ್ ಸ್ಟೀಲ್ ಸಂಸ್ಥೆಯಿಂದ ತಾಲೂಕಿನ ಅರೇಹಳ್ಳಿ ಸಂಚಾರ ಠಾಣೆಗೆ ಬುಧವಾರ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.
ಉದ್ಯಮಿ ಯು.ಎಂ. ತೀರ್ಥಮಲ್ಲೇಶ್ ಮಾತನಾಡಿ, ಸಂಚಾರ ನಿಯಂತ್ರಣ, ಉತ್ಸವ ಹಾಗೂ ತುರ್ತು ಸಂದರ್ಭಗಳಲ್ಲಿ ಬ್ಯಾರಿಕೇಡ್‌ಗಳು ಪೊಲೀಸರಿಗೆ ಉಪಯುಕ್ತವಾಗಲಿದೆ ಎಂಬ ಉದ್ದೇಶದಿಂದ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಗಿದೆ. ಅಲ್ಲದೆ ಅರೇಹಳ್ಳಿಯಲ್ಲಿ ಹೆಚ್ಚು ಜನ ಸಂದಣಿ ಇರುವ ಪಟ್ಟಣ. ಇಲ್ಲಿಗೆ ಬರುವ ಬಹುತೇಕರು ಕೂಲಿ ಕಾರ್ಮಿಕರೇ ಆಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ 5 ಬ್ಯಾರಿಕೇಡ್‌ಗಳನ್ನು ನಮ್ಮ ಸಂಸ್ಥೆಯಿಂದ ವಿತರಿಸಲಾಗಿದೆ. ಪ್ರತಿ ವರ್ಷವೂ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು ಎಂದರು.
ಅರೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಶೋಭಾ ಬರಮಣ್ಣನವರ್ ಮಾತನಾಡಿ, ಎಸ್.ಎಸ್. ಸ್ಟೀಲ್ ಸಂಸ್ಥೆ ನೀಡಿರುವ ಬ್ಯಾರಿಕೇಡ್‌ಗಳನ್ನು ಸಾರ್ವಜನಿಕ ಕಾರ್ಯಕ್ರಮ ಹಾಗೂ ವಾಹನ ಸಂಚಾರ ನಿಯಂತ್ರಣದ ಸಂದರ್ಭ ಪರಿಣಾಮಕಾರಿಯಾಗಿ ಬಳಸಲಾಗುವುದು. ಖಾಸಗಿ ಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಸಾರ್ವಜನಿಕ ಹಿತಕ್ಕಾಗಿ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.
ಎಸ್.ಎಸ್.ಸ್ಟೀಲ್ ಸಂಸ್ಥೆಯ ಪಾಲುದಾರ ಕೆ.ಎನ್.ಸುಬ್ರಹ್ಮಣ್ಯ, ಕೆ.ಜಿ.ಚಂದ್ರಶೇಖರ್, ಎಚ್.ಎಚ್.ಉದಯ್, ಪೊಲೀಸ್ ಸಿಬ್ಬಂದಿ ಮಂಜೇಗೌಡ, ಸಂಶುದ್ದೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net