ಬಾಪೂಜಿ ಸೊಸೈಟಿಗೆ ೨೧.೯೪ ಕೋಟಿ ರೂ. ಲಾಭ

ಮಹಾಸಭೆ ಉದ್ಧೇಶಿಸಿ ಬಾಪೂಜಿ ಮಲ್ಟಿಸ್ಟೇಟ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಪಾಟೀಲ ಮಾತನಾಡಿದರು.
ಮಹಾಸಭೆ ಉದ್ಧೇಶಿಸಿ ಬಾಪೂಜಿ ಮಲ್ಟಿಸ್ಟೇಟ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಪಾಟೀಲ ಮಾತನಾಡಿದರು.
Published on

ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಗಳ ಪ್ರಥಮ ಮಲ್ಟಿಸ್ಟೇಟ್ ಸೊಸೈಟಿ ಎನ್ನುವ ಹೆಗ್ಗಳಿಕೆ ಹೊಂದಿರುವ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ೨೦೨೫-೨೬ನೇ ಸಾಲಿನಲ್ಲಿ ೨೧.೯೪ ಕೋಟಿ ರೂ. ನಿವ್ಹಳ ಲಾಭ ಗಳಿಸಿದ್ದು, ಸೊಸೈಟಿಯ ಸದಸ್ಯರಿಗೆ ಶೇ. ೧೦ ಡಿವ್ಹಿಡೆಂಡ್ ವಿತರಿಸಲು ಆಡಳಿತ ಮಂಡಳಿ ಶಿ-Áರಸ್ಸು ಮಾಡಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಬಾಗಲಕೋಟೆ ನವನಗರದ ಕಲಾಭವನದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರು ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೦೮ರಲ್ಲಿ ೧೭೦೨ ಜನ ಸದಸ್ಯರು ಹಾಗೂ ೧೨.೨೮ ಲಕ್ಷ ರೂ. ಶೇರು ಬಂಡವಾಳದಿAದ ಆರಂಭವಾದ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಕಡಿಮೆ ಅವಽಯಲ್ಲಿ ಎಲ್ಲರ ಸಹಕಾರದೊಂದಿಗೆ ಅತ್ಯುನ್ನತ ಪ್ರಗತಿ ಹೊಂದಿ, ಇದೀಗ ಮಲ್ಟಿಸ್ಟೇಟ್ ಸೊಸೈಟಿಯಾಗಿ ಪರಿವರ್ತನೆ ಹೊಂದಿದೆ ಎಂದರು.
ಸದ್ಯ ೧೩೧ ಶಾಖೆಗಳನ್ನು ಹೊಂದಿರುವ ಬಾಪೂಜಿ ಮಲ್ಟಿಸ್ಟೇಟ್ ಸೊಸೈಟಿಯಲ್ಲಿ ೨೦೨೬ರ ಮಾರ್ಚ್ ಅಂತ್ಯಕ್ಕೆ ೭೦,೨೭೧ ಸದಸ್ಯರನ್ನು ಹೊಂದಿದ್ದು, ೯.೩೭ ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಹಣಕಾಸು ವರ್ಷಾಂತ್ಯಕ್ಕೆ ೧೭೯೦.೨೫ ಕೋಟಿ ರೂ. ಇದ್ದ ಠೇವಣಿ ಸದ್ಯ ೨೧೦೦ ಕೋಟಿ ರೂ. ಸಂಗ್ರಹಣೆಯಾಗಿ ದಾಖಲೆ ನಿರ್ಮಾಸಿದೆ. ಮುಂದಿನ ವರ್ಷ ಠೇವಣಿ ಸಂಗ್ರಹ ೨೭೦೦ ಕೋಟಿ ರೂ. ಗುರಿ ಹೊಂದಿದೆ ಎಂದು ತಿಳಿಸಿದರು.
ಸಂಸ್ಥೆಯೂ ಸದಸ್ಯರ ಆರ್ಥಿಕ ಸಬಲೀಕರಣ ಉದ್ದೇಶ ಹೊಂದಿದ್ದು, ಸದಸ್ಯರಿಗೆ ಕಡಿಮೆ ಬಡ್ಡಿದರ, ಸರಳ ಬಡ್ಡಿ ಆಕರಣೆ, ಕಡಿಮೆ ವೆಚ್ಚದ ನೋಂದಣಿ ಶುಲ್ಕ, ಹಲವಾರು ಸಾಲದ ಯೋಜನೆ ರೂಪಿಸಿದ್ದು, ಸದಸ್ಯರು ಸಾಲ ಪ್ರಯೋಜನ ಪಡೆದು ಅಸಲು ಹಾಗೂ ಬಡ್ಡಿ ಮರು ಪಾವತಿಸುವ ಮೂಲಕ ತಾವು ಹಾಗೂ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿ ಹೊಂದಿದ್ದ ಬಾಪೂಜಿ ಸೊಸೈಟಿ ರಾಜ್ಯ ಸರ್ಕಾರದ ಅನುಮತಿ ಪಡೆದು ರಾಜ್ಯಮಟ್ಟಕ್ಕೆ ವಿಸ್ತರಿಸಿಕೊಂಡು, ಕಳೆದ ವರ್ಷ ಮಹಾರಾಷ್ಟç ರಾಜ್ಯಕ್ಕೂ ತನ್ನ ಕಾರ್ಯಾಕ್ಷೇತ್ರವನ್ನು ವಿಸ್ತರಿಸುವ ಮೂಲಕ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಾಗಿ ಹೊರಹೊಮ್ಮಿದೆ. ಸದ್ಯ ಬಾಗಲಕೋಟೆ, ವಿಜಯಪುರ, ಧಾರವಾಡ, ಕೊಪ್ಪಳ, ಬೆಳಗಾವಿ, ಗದಗ, ಹಾವೇರಿ, ರಾಯಚೂರ, ಯಾದಗಿರಿ, ಜಿಲ್ಲೆಗಳಲ್ಲಿ ೧೩೧ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.
ಮಲ್ಟಿಸ್ಟೇಟ್ ಸೊಸೈಟಿ ಕಾಯ್ದೆಯಲ್ಲಿ ಬಾಪೂಜಿ ಸಹಕಾರಿ ಸಂಘಕ್ಕೆ ಇತರೆ ಸಹಕಾರಿ ಸಂಘಗಳು ಹಾಗೂ ಇತರೆ ಎಲ್ಲ ಬಗೆಯ ಸಂಘ, ಸಂಸ್ಥೆಗಳಿAದ ಠೇವಣಿ ಸಂಗ್ರಹಿಸಲು ಕಾನೂನು ಬದ್ಧವಾದ ಅವಕಾಶ ಇದ್ದು, ಇದರ ಪ್ರಯೋಜನ ಪಡೆದುಕೊಂಡು ಸಂಘ ಸಂಸ್ಥೆಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಎಸ್.ಆರ್.ಪಾಟೀಲ ಅವರು ಮನವಿ ಮಾಡಿದರು.
ವೇದಿಕೆಯಲ್ಲಿ ಬಾಪೂಜಿ ಮಲ್ಟಿಸ್ಟೇಟ್ ಸೊಸೈಟಿ ಉಪಾಧ್ಯಕ್ಷ ಜಿ.ಎನ್.ಪಾಟೀಲ, ನಿರ್ದೇಶಕರಾದ ಎ.ಎಂ.ಶೆಟ್ಟರ, ಎಸ್.ಕೆ.ಯಡಹಳ್ಳಿ, ಎಸ್.ಬಿ.ಬೆಳಗಲಿ, ಪಿ.ಆರ್.ಗೌಡರ, ಎಲ್.ಕೆ.ಬಳಗಾನೂರ, ಆರ್.ಪಿ.ಕಲಬುರ್ಗಿ, ಎ.ಎಸ್.ಲಾಗಲೋಟಿ, ಎಸ್.ಸಿ.ಬಂಡಿವಡ್ಡರ, ಎಸ್.ಕೆ.ತಳವಾರ, ಎಂ.ಎಸ್.ಪಾಟೀಲ, ಎಂ.ಟಿ.ಅರಳಿಕಟ್ಟಿ, ಎಸ್.ಎಸ್.ರಂಗನಗೌಡ್ರ, ಎಸ್.ಎಸ್.ಪಾತ್ರೋಟ ಇದ್ದರು. ಮುಖ್ಯ ಕಾರ್ಯನಿರ್ವಾಹಣಾಽಕಾರಿ ಎಸ್.ಸಿ.ಮೋಟಗಿ ವಾರ್ಷಿಕ ವರದಿ ವಾಚಿಸಿದರು. ವ್ಯವಸ್ಥಾಪಕ ಮಲ್ಲು ಮುರಕಾಚೆಟ್ಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net