ಬಾನು ಮುಷ್ತಾಕ್ ಕ್ಷಮೆ ಕೇಳಲು ಒತ್ತಾಯ

pramod mutalik
pramod mutalik
Published on
ಬೆಳಗಾವಿ: ಲೇಖಕಿ ಬಾನು ಮುಷ್ತಾಕ್‌ರಿಗೆ ಚಪ್ಪಲಿಯೇ ದೇವರಾಗಿದ್ದಲ್ಲಿ ಕಾಲಲ್ಲಿ ಮೆಟ್ಟಿಕೊಂಡು ಓಡಾಡುವುದೇಕೆೆ? ಕೊರಳಲ್ಲಿ ಇಲ್ಲವೇ ತಲೆ ಮೇಲೆ ಇಟ್ಟುಕೊಂಡು ಓಡಾಡಲಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಪ್ಪಲಿ ತೆಗೆದಿಟ್ಟು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಹಾರ ಹಾಕಿ ಎಂದು ವಿನಂತಿಸಿದಾಗ ಅವರು ಒಪ್ಪಿಲ್ಲ. ಚಪ್ಪಲಿ ಹಾಕಿಕೊಂಡು ಹಾರ ಹಾಕಿದ್ದಾರೆ. ಬಳಿಕ ಅದನ್ನು ಸಮರ್ಥಿಸಿಕೊಂಡು ಚಪ್ಪಲಿಯೇ ದೇವರು ಎಂದಿದ್ದಾರೆ.
ಇದು ವ್ಯವಸ್ಥಿತವಾಗಿ ಅವಮಾನ ಮಾಡುವ ವರ್ತನೆಯಾಗಿದ್ದು, ಸಂವಿಧಾನಕ್ಕೆ ಮಾಡಿದ ಅವಮಾನ ಎಂದರು. ಈ ರೀತಿಯ ಮಾನಸಿಕತೇ ಬೆಳೆಸಿದ್ದೆ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net