ಪಿಎಚ್.ಡಿ. ಪ್ರವೇಶ ಪರೀಕ್ಷೆಯನ್ನು ಜು.5ರಂದು ನಡೆಸಲಾಗಿದ್ದು, ಮೌಖಿಕ ಪರೀಕ್ಷೆಯನ್ನು ಆ.3, 4 ಮತ್ತು 5ರಂದು ನಡೆಸಲು ಉದ್ದೇಶಿಸಿತ್ತು. ಕಾರಣಾಂತರಗಳಿಂದ ಮುಂದೂಡಿದ್ದ ವಿಶ್ವವಿದ್ಯಾಲಯವು ಇದೀಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ. ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ವೇಳಾಪಟ್ಟಿಯನ್ನು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಅಭ್ಯರ್ಥಿಗಳ ಮೌಖಿಕ ಪರೀಕ್ಷೆಯು ಸಂಬಂಧಿತ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ನಡೆಯಲಿದೆ.