ಒಮನ್‌ನಲ್ಲಿ ಬೆಂವಿವಿ ಪ್ರಾದೇಶಿಕ ಕೇಂದ್ರ: ನಿಯೋಗದೊಂದಿಗೆ ಚರ್ಚೆ

ಬೆಂಗಳೂರು ವಿಶ್ವವಿದ್ಯಾಲಯ- ಒಮನ್‌ನ ಸೈಬರ್ ನಾಲೆಜ್ ಅಕಾಡೆಮಿ ನಿಯೋಗ
ಬೆಂಗಳೂರು ವಿಶ್ವವಿದ್ಯಾಲಯ- ಒಮನ್‌ನ ಸೈಬರ್ ನಾಲೆಜ್ ಅಕಾಡೆಮಿ ನಿಯೋಗ
Published on

ಪ್ರಮುಖ ಮುಖ್ಯಾಂಶಗಳು

  • ಒಮನ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಫ್-ಕ್ಯಾಂಪಸ್ ಕೇಂದ್ರ ಸ್ಥಾಪನೆ, ಪಠ್ಯಕ್ರಮ ವಿನಿಮಯ ಹಾಗೂ ವಿವಿಧ ಶೈಕ್ಷಣಿಕ ಸಹಯೋಗಗಳ ಕುರಿತು ಪ್ರಾಥಮಿಕ ಹಂತದಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
  • ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸುವ ಕುರಿತು ಸಭೆ
  • ಒಮನ್ ಸೇರಿ ವಿವಿಧ ದೇಶಗಳ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಶೈಕ್ಷಣಿಕ ಪಾಲುದಾರಿಕೆಗಳು ಮಹತ್ವದ್ದಾಗಿವೆ
ಬೆಂಗಳೂರು:

ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಒಮನ್‌ನ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಸೈಬರ್ ನಾಲೆಜ್ ಅಕಾಡೆಮಿ ನಿಯೋಗದೊಂದಿಗೆ ವಿಶೇಷ ಸಭೆ ನಡೆಸಿತು.

ಬೆಂಗಳೂರು ವಿವಿಯೊಂದಿಗೆ ಶೈಕ್ಷಣಿಕ ಸಂಯೋಜನೆ, ಒಮನ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಫ್-ಕ್ಯಾಂಪಸ್ ಕೇಂದ್ರ ಸ್ಥಾಪನೆ, ಪಠ್ಯಕ್ರಮ ವಿನಿಮಯ ಹಾಗೂ ವಿವಿಧ ಶೈಕ್ಷಣಿಕ ಸಹಯೋಗಗಳ ಕುರಿತು ಪ್ರಾಥಮಿಕ ಹಂತದಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಬೆಂ.ವಿವಿ ಕುಲಪತಿ ಪ್ರೊ. ಸಿ. ಶಿವರಾಜು, ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಶೈಕ್ಷಣಿಕ ವ್ಯಾಪ್ತಿಯನ್ನು ವಿಸ್ತರಿಸುವುದು, ಜಾಗತಿಕ ಮಟ್ಟದಲ್ಲಿ ಜ್ಞಾನ ಮತ್ತು ಶೈಕ್ಷಣಿಕ ಸಂಪನ್ಮೂಲಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು, ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಮತ್ತು ಪರಿಣತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸುವುದು ಹಾಗೂ ಒಮನ್ ಸೇರಿ ವಿವಿಧ ದೇಶಗಳ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಶೈಕ್ಷಣಿಕ ಪಾಲುದಾರಿಕೆಗಳು ಮಹತ್ವದ್ದಾಗಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವೆ ಶ್ರೀಮತಿ ಕೆ.ಟಿ. ಶಾಂತಲಾ, ಪ್ರಭಾರ ಕುಲಸಚಿವರು (ಮೌಲ್ಯಮಾಪನ) ಪ್ರೊ. ಕೆ. ನಿರ್ಮಲಾ ಹಾಗೂ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ ಹನುಮಂತಪ್ಪ, ಸಿಂಪ್ಲಿಫೈ ಗ್ಲೋಬಲ್ ಸರ್ವೀಸಸ್ ನಿರ್ದೇಶಕಿ ವಿದ್ಯಾರಾಣಿ, ಪ್ರೀಮಿಯರ್ ಪಾಯಿಂಟ್ ಹೆಲ್ತ್ ಒಮನ್ ಅಧ್ಯಕ್ಷ, ಅಲಿ ಶಬಾನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net